ನಿಮ್ಮಲ್ಲಿ 80,000 ಪೊಲೀಸರಿದ್ದಾರೆ... ಅಮೃತ್ ಪಾಲ್ ಬಿಟ್ಟು ಬೇರೆಲ್ಲರನ್ನು ಬಂಧಿಸಿದ್ದು ಹೇಗೆ?: ಪಂಜಾಬ್ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ 

ಅಮೃತ್ ಪಾಲ್ ಸಿಂಗ್ ಬಂಧನದ ವಿಚಾರವಾಗಿ ಪಂಜಾಬ್ ಹಾಗೂ ಹರ್ಯಾಣ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಅಮೃತ್ ಪಾಲ್ ಸಿಂಗ್ ಹೊರತುಪಡಿಸಿ ಎಲ್ಲರೂ ಬಂಧನಕ್ಕೊಳಗಾಗಿರುವುದು ಹೇಗೆ ಎಂದು ಪ್ರಶ್ನಿಸಿದೆ. 
ಅಮೃತ್ ಪಾಲ್ ಸಿಂಗ್
ಅಮೃತ್ ಪಾಲ್ ಸಿಂಗ್

ಚಂಡೀಗಢ: ಅಮೃತ್ ಪಾಲ್ ಸಿಂಗ್ ಬಂಧನದ ವಿಚಾರವಾಗಿ ಪಂಜಾಬ್ ಹಾಗೂ ಹರ್ಯಾಣ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಅಮೃತ್ ಪಾಲ್ ಸಿಂಗ್ ಹೊರತುಪಡಿಸಿ ಎಲ್ಲರೂ ಬಂಧನಕ್ಕೊಳಗಾಗಿರುವುದು ಹೇಗೆ ಎಂದು ಪ್ರಶ್ನಿಸಿದೆ. 

ಅಮೃತ್ ಪಾಲ್ ಸಿಂಗ್ ತಪ್ಪಿಸಿಕೊಂಡಿದ್ದರೆ, ಅದು ಗುಪ್ತಚರ ವೈಫಲ್ಯ ಎಂದು ಕೋರ್ಟ್ ಹೇಳಿದೆ. 

ಅಡ್ವೊಕೇಟ್ ಇಮಾನ್ ಸಿಂಗ್ ಖಾರ ಅವರು ಅಮೃತ್ ಪಾಲ್ ಸಿಂಗ್ ಅವರನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸಬೇಕೆಂದು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
 
ಇಡೀ ಕಾರ್ಯಾಚರಣೆಯನ್ನು ಯೋಜನಾಬದ್ಧವಾಗಿ ನಡೆಸಿದ್ದರೂ ಅಮೃತ್ ಪಾಲ್ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ, ಒಂದು ವೇಳೆ ತಪ್ಪಿಸಿಕೊಂಡಿದ್ದರೆ ಅದು ಗುಪ್ತಚರ ವೈಫಲ್ಯ ಎಂದು ನ್ಯಾ. ಎನ್ಎಸ್ ಶೇಖಾವತ್ ಎ.ಜಿ ವಿನೋದ್ ಘಾಯ್ ಅವರನ್ನು ಪ್ರಶ್ನಿಸಿದ್ದಾರೆ. 

ನಾವು ಇತರ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಎಜಿ ಹೇಳಿದ್ದಕ್ಕೆ ನಿಮ್ಮಲ್ಲಿ 80,000 ಪೊಲೀಸರಿದ್ದಾರೆ... ಅಮೃತ್ ಪಾಲ್ ಬಿಟ್ಟು ಬೇರೆಲ್ಲರೂ ಬಂಧಿತರಾಗಿದ್ದು ಹೇಗೆ? ಎಂದು ಕೋರ್ಟ್ ಪ್ರಶ್ನಿಸಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com