ಕಾಂಗರೂ ನ್ಯಾಯಾಲಯದ ಆದೇಶ: 'ವಾಮಾಚಾರ' ಆರೋಪ, ವೃದ್ಧ ದಂಪತಿಯನ್ನು ಹೊಡೆದು ಕೊಂದ ಗ್ರಾಮಸ್ಥರು

ಆಘಾತಕಾರಿ ಘಟನೆಯೊಂದರಲ್ಲಿ, ವೃದ್ಧ ದಂಪತಿ ವಾಮಾಚಾರ ಮಾಡುತ್ತಿದ್ದಾರೆ ಎಂದು ಕಾಂಗರೂ ನ್ಯಾಯಾಲಯ (ಜನರ ಗುಂಪು ನಡೆಸುವ ಅನಧಿಕೃತ ನ್ಯಾಯಾಲಯ) ತೀರ್ಪು ನೀಡಿದ ನಂತರ, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಅವರನ್ನು ಹೊಡೆದು ಕೊಂದಿದ್ದಾರೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ವೃದ್ಧ ದಂಪತಿ ವಾಮಾಚಾರ ಮಾಡುತ್ತಿದ್ದಾರೆ ಎಂದು ಕಾಂಗರೂ ನ್ಯಾಯಾಲಯ (ಜನರ ಗುಂಪು ನಡೆಸುವ ಅನಧಿಕೃತ ನ್ಯಾಯಾಲಯ) ತೀರ್ಪು ನೀಡಿದ ನಂತರ, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಅವರನ್ನು ಹೊಡೆದು ಕೊಂದಿದ್ದಾರೆ. ಗ್ರಾಮದ ಮುಖ್ಯಸ್ಥನ ಹೆಂಡತಿಯ ಸಾವಿಗೆ ದಂಪತಿಯ ವಾಮಾಚಾರವೇ ಕಾರಣ ಎಂದು ಆರೋಪಿಗಳು ಶಂಕಿಸಿದ್ದಾರೆ.

ಪೊಲೀಸರ ಪ್ರಕಾರ, ಸೈಂಥಿಯ ಗ್ರಾಮದ ಮುಖ್ಯಸ್ಥ ರುಬಾಯಿ ಬೆಸ್ರಾ ಮತ್ತು ಇತರ ಪ್ರಭಾವಿ ವ್ಯಕ್ತಿಗಳು ಬೆಸ್ರಾ ಅವರ ಪತ್ನಿ ಕೆಲವು ಕಾಯಿಲೆಗಳಿಂದ ಸಾವನ್ನಪ್ಪಿದ ನಂತರ ಸೋಮವಾರ ಮಧ್ಯಾಹ್ನ ಕಾಂಗರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಎಲ್ಲಾ ಗ್ರಾಮಸ್ಥರಿಗೂ ಸೂಚಿಸಿದರು.

'ಆದರೆ, ವೃದ್ಧ ದಂಪತಿ ಕಾಂಗರೂ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಾಗ, ಅವರ ಮನೆಗೆ ಪುರುಷರ ಗುಂಪೊಂದು ಬಂದಿತು. ಅವರು ಪಾರ್ಬತಿ ಮತ್ತು ಆಕೆಯ ಪತಿಯನ್ನು ಸ್ಥಳಕ್ಕೆ ಎಳೆದೊಯ್ದಿದ್ದಾರೆ. ಈ ವೇಳೆ, ಪಾಂಡು ಕೈಮುಗಿದು ಮನವಿ ಮಾಡಿದರು ಕೂಡ, ಯಾರೊಬ್ಬರೂ ಕಿಡಿಗೊಟ್ಟಿಲ್ಲ' ಎಂದು ಸಂತ್ರಸ್ತರ ಕುಟುಂಬ ಸದಸ್ಯರು ಮಾಡಿದ ಆರೋಪಗಳನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ದಂಪತಿಯನ್ನು ಬಿದಿರಿನ ಕೋಲುಗಳಿಂದ ಅಮಾನುಷವಾಗಿ ಥಳಿಸಿದ್ದಾರೆ. ಅವರು ಪ್ರಜ್ಞೆ ತಪ್ಪಿದಾಗ, ದಾಳಿಕೋರರು ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ಸಂಬಂಧಿಕರೇ ದಂಪತಿಯನ್ನು ಬೋಲ್ಪುರ್‌ನಲ್ಲಿರುವ ಸಿಯಾನ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ದಂಪತಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅವರ ದೇಹಗಳನ್ನು ಹಸ್ತಾಂತರಿಸುತ್ತಿದ್ದಂತೆ, ರುಬಾಯಿ ಬೆಸ್ರಾ ಮತ್ತು ಇತರೆ ಜನರು ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ದೂರದ ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಈ ವೇಳೆ ಸ್ಮಶಾನದ ಸಿಬ್ಬಂದಿ, ಹತ್ತಿರವಿರುವ ಸ್ಮಶಾನಕ್ಕೆ ಹೋಗದೆ ದೂರದ ಸ್ಥಳಕ್ಕೆ ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು ತೃಪ್ತಿಕರ ಉತ್ತರವನ್ನು ನೀಡಿಲ್ಲ. ಆ ವೇಳೆಗೆ ಸಂತ್ರಸ್ತರ ಸಂಬಂಧಿಕರು ಅಲ್ಲಿಗೆ ಬಂದು, ಕಾಂಗರೂ ನ್ಯಾಯಾಲಯದಲ್ಲಿ ನಡೆದಿದ್ದನ್ನು ಬಹಿರಂಗಪಡಿಸಿದ್ದಾರೆ' ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಬೆಸ್ರಾನನ್ನು ಬಂಧಿಸಿದ್ದಾರೆ ಮತ್ತು ಪಾಂಡು ಸಾಯುವ ಮೊದಲು ಗುರುತಿಸಿದ ಇತರ ಐವರನ್ನೂ ಹುಡುಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com