ಕೆನಡಾದಲ್ಲಿ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ 'ಗೋಲ್ಡಿ ಬ್ರಾರ್' ಹೆಸರು!

ಪಂಜಾಬ್ ನ ಖ್ಯಾತ ಗಾಯಕ- ರಾಜಕಾರಣಿ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ನ್ನು ಕೆನಡಾ ಸರ್ಕಾರ ಬೇಕಾಗಿರುವ ಕ್ರಿಮಿನಲ್ ಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. 
ಸಿಧು ಮೂಸೆವಾಲಾ
ಸಿಧು ಮೂಸೆವಾಲಾ

ಕೆನಡಾ: ಪಂಜಾಬ್ ನ ಖ್ಯಾತ ಗಾಯಕ- ರಾಜಕಾರಣಿ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ನ್ನು ಕೆನಡಾ ಸರ್ಕಾರ ಬೇಕಾಗಿರುವ ಕ್ರಿಮಿನಲ್ ಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. 

25 ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ ಪಟ್ಟಿಯಲ್ಲಿ ಮೂಸೆವಾಲ ಹತ್ಯೆ ಪ್ರಕರಣದ ಆರೋಪಿಗಳಾದ ಸತಿಂದರ್ ಸಿಂಗ್ ಬ್ರಾರ್ ನ್ನು ಸೇರಿಸಲಾಗಿದೆ. ಬೋಲೋ (ಬಿ ಆನ್ ದಿ ಲುಕ್‌ಔಟ್)  ಪಟ್ಟಿಯ ಪ್ರಕಾರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನ ಪಂಜಾಬ್ ಮೂಲದ ಅಂಗಸಂಸ್ಥೆಯು ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್‌ ರಿಗೆ ಕೊಲೆ ಪ್ರಕರಣದಲ್ಲಿ ಬೇಕಾಗಿದೆ.

ಬಿ ಆನ್ ದಿ ಲುಕ್ ಔಟ್ ಕೆನಡಾದ ಎನ್ ಜಿಒ ಸಂಸ್ಥೆಯಾಗಿದ್ದು, ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕೆನಡಾದಲ್ಲಿ 25 ಮಂದಿ ಆರೋಪಿಗಳ ಫೋಟೋದೊಂದಿಗೆ ಬ್ರಾರ್ ಜೀವಂತ ಗಾತ್ರದ ಕಟೌಟ್ ನ್ನು ಟೊರೊಂಟೊದ ಯೋಂಗೆ-ಡುಂಡಾಸ್ ಚೌಕದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ. ಆದರೆ ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿರುವ ಬ್ರಾರ್ ಕುರಿತ ಮಾಹಿತಿಗೆ ಯಾವುದೇ ಬಹುಮಾನವನ್ನು ಘೋಷಿಸಲಾಗಿಲ್ಲ.

2017 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾವನ್ನು ತಲುಪಿದ 29 ವರ್ಷದ ಯುವಕ ಬ್ರಾರ್, ಮೇ 29, 2022 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಎಂದು ಜನಪ್ರಿಯವಾಗಿರುವ ಶುಭದೀಪ್ ಸಿಂಗ್ ಸಿಧು ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com