ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್ ಸ್ಟರ್ ಎನ್ ಕೌಂಟರ್: ಅನಿಲ್ ದುಜಾನಾಗೆ ಗುಂಡಿಕ್ಕಿ ಹತ್ಯೆಗೈದ ಎಸ್ ಟಿಎಫ್

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಇಂದು ಗುರುವಾರ ಮಧ್ಯಾಹ್ನ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಕುಖ್ಯಾತ ದರೋಡೆಕೋರ ಅನಿಲ್ ದುಜಾನಾನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ.
ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಗೌತಮ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದ ಪೊಲೀಸರು
ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಗೌತಮ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದ ಪೊಲೀಸರು
Updated on

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಇಂದು ಗುರುವಾರ ಮಧ್ಯಾಹ್ನ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಕುಖ್ಯಾತ ದರೋಡೆಕೋರ ಅನಿಲ್ ದುಜಾನಾನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ. ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಗೌತಮ್ ಬುದ್ಧ ನಗರ ಜಿಲ್ಲೆಯ ಬಾದಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುಜಾನಾ ಗ್ರಾಮದ ನಿವಾಸಿ.

ದುಜಾನಾ ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜನರಲ್ಲಿ ಭೀತಿ ಹುಟ್ಟಿಸಿದ್ದನು. ಈತ ಸಂಘಟಿತ ಕ್ರಿಮಿನಲ್ ಗ್ಯಾಂಗ್ ನ್ನು ನಡೆಸುತ್ತಿದ್ದನು. ಈತನ ವಿರುದ್ಧ 18 ಕೊಲೆಗಳು, ಸುಲಿಗೆ, ದರೋಡೆ, ಭೂಕಬಳಿಕೆ, ತೆರವು ಸೇರಿದಂತೆ 62 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ಅನಿಲ್ ದುಜಾನಾ ನಿಜವಾದ ಹೆಸರು ಅನಿಲ್ ನಗರ. ಇಂದು ಮೀರತ್‌ನ ಜಾನಿ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದೆ.ಡಿಸೆಂಬರ್ 2022 ರಲ್ಲಿ, ಅನಿಲ್ ದುಜಾನಾ ಅವರನ್ನು ದೆಹಲಿ ಪೊಲೀಸರು ಮಯೂರ್ ವಿಹಾರ್ ಪ್ರದೇಶದಿಂದ ಬಂಧಿಸಿದರು. ದುಜಾನಾ ಅವರ ತಲೆಗೆ 50,000 ರೂ ಬಹುಮಾನ ಘೋಷಿಸಿದ್ದು ಈತ ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com