ಸಿಕ್ಕಿಂ ಸರ್ಕಾರದಿಂದ 2 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಉದ್ಯೋಗಿಗಳಿಗೆ ವೇತನ ಬಡ್ತಿ

ಸಿಕ್ಕಿಂನಲ್ಲಿ ಸ್ಥಳೀಯ ಸಮುದಾಯಗಳ ಜನಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರಾಜ್ಯ ಸರ್ಕಾರವು ಈ ವರ್ಷದ ಜನವರಿ 1ರಿಂದ ಜಾರಿಗೆ ಬರುವಂತೆ ಎರಡು ಅಥವಾ ಮೂರು ಮಕ್ಕಳನ್ನು ಹೊಂದಿರುವ ತನ್ನ ಉದ್ಯೋಗಿಗಳಿಗೆ ಮುಂಗಡ ಮತ್ತು ಹೆಚ್ಚುವರಿ ಇನ್ಕ್ರಿಮೆಂಟ್ ನೀಡಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ ಸ್ಥಳೀಯ ಸಮುದಾಯಗಳ ಜನಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರಾಜ್ಯ ಸರ್ಕಾರವು ಈ ವರ್ಷದ ಜನವರಿ 1ರಿಂದ ಜಾರಿಗೆ ಬರುವಂತೆ ಎರಡು ಅಥವಾ ಮೂರು ಮಕ್ಕಳನ್ನು ಹೊಂದಿರುವ ತನ್ನ ಉದ್ಯೋಗಿಗಳಿಗೆ ಮುಂಗಡ ಮತ್ತು ಹೆಚ್ಚುವರಿ ಇನ್ಕ್ರಿಮೆಂಟ್ ನೀಡಲು ನಿರ್ಧರಿಸಿದೆ.

ಮೇ 10ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ಸಿಬ್ಬಂದಿ ಇಲಾಖೆಯ ಕಾರ್ಯದರ್ಶಿ ರಿನ್ಜಿಂಗ್ ಚೆವಾಂಗ್ ಭುಟಿಯಾ ಅವರು ಸಿಕ್ಕಿಂ ಪ್ರಮಾಣಪತ್ರ / ಗುರುತಿನ ಪ್ರಮಾಣಪತ್ರವನ್ನು ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಬಡ್ತಿ ನೀಡಲಿದೆ.

ಮೂವರು ಮಕ್ಕಳನ್ನು ಹೊಂದಿರುವ ನೌಕರರಿಗೆ ಹೆಚ್ಚುವರಿ ವೇತನ ಬಡ್ತಿ ಸಿಗಲಿದೆ ಎಂದು ಹೇಳಿದರು. ಈ ಯೋಜನೆಯು 2023ರ ಜನವರಿ 1ರಿಂದ ಜಾರಿಗೆ ಬರಲಿದೆ. 2023ರ ಜನವರಿ 1ರಂದು ಅಥವಾ ನಂತರ ಎರಡನೇ ಮತ್ತು ಮೂರನೇ ಮಗು ಜನಿಸಿದ ಉದ್ಯೋಗಿಗಳು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಭುಟಿಯಾ ಹೇಳಿದರು.

ದತ್ತು ಪಡೆದರೆ ಈ ಯೋಜನೆಯ ಪ್ರಯೋಜನ ಅನ್ವಯವಾಗುವುದಿಲ್ಲ ಎಂದು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.

ಸುಮಾರು ಏಳು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಿಕ್ಕಿಂ ಭಾರತದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com