55 ವರ್ಷದ ಅನಧಿಕೃತ ಕಾಳಿ ಮಂದಿರ ಧ್ವಂಸ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಇಲ್ಲಿನ ಮಾಯಾಪುರಿ ಚೌಕ್‌ನಲ್ಲಿ ಅನಧಿಕೃತ ಮತ್ತು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿರುವ 55 ವರ್ಷಗಳಷ್ಟು ಹಳೆಯದಾದ ಕಾಳಿ ದೇವಸ್ಥಾನವನ್ನು ಕೆಡವಲು ಏಕಪೀಠ ಮಧ್ಯಪ್ರವೇಶಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್

ನವದೆಹಲಿ: ಇಲ್ಲಿನ ಮಾಯಾಪುರಿ ಚೌಕ್‌ನಲ್ಲಿ ಅನಧಿಕೃತ ಮತ್ತು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿರುವ 55 ವರ್ಷಗಳಷ್ಟು ಹಳೆಯದಾದ ಕಾಳಿ ದೇವಸ್ಥಾನವನ್ನು ಕೆಡವಲು ಏಕಪೀಠ ಮಧ್ಯಪ್ರವೇಶಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ವಿಭಾಗೀಯ ಪೀಠವು ವಿಗ್ರಹಗಳು ಮತ್ತು ಇತರ ಧಾರ್ಮಿಕ ವಸ್ತುಗಳನ್ನು ದೇವಾಲಯದಿಂದ ಇತರ ದೇವಾಲಯಗಳಿಗೆ ಸ್ಥಳಾಂತರಿಸುವ ಸಮಯವನ್ನು ವಿಸ್ತರಿಸಲು ನಿರಾಕರಿಸಿತು. ಹೆಚ್ಚು ಸಮಯವಿಲ್ಲ. ಕ್ಷಮಿಸಿ, ನಾವು ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ಪೀಠ ಹೇಳಿದೆ.

ಮೇ 11ರಂದು ಏಕಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದೇಗುಲದ ಅರ್ಚಕ ಹಾಗೂ ಉಸ್ತುವಾರಿ ದುರ್ಗಾ ಪಿ ಮಿಶ್ರಾ ಅವರು ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಪೀಠ ಈ ಆದೇಶ ನೀಡಿದೆ.

ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಏಪ್ರಿಲ್ 25ರಂದು ಹೊರಡಿಸಿದ ನೋಟಿಸ್ ಮತ್ತು ಕಾಳಿ ಮಾತಾ ಮಂದಿರವನ್ನು ಕೆಡವಲು ನಿರ್ಧರಿಸಿದ ಧಾರ್ಮಿಕ ಸಮಿತಿಯ ಸಭೆಯ ನಡಾವಳಿಗಳನ್ನು ರದ್ದುಗೊಳಿಸುವಂತೆ ಮಿಶ್ರಾ ಕೋರಿದ್ದರು.

ಮಿಶ್ರಾ ಪರ ವಾದ ಮಂಡಿಸಿದ ವಕೀಲ ಸುನಿಲ್ ಫರ್ನಾಂಡಿಸ್, ಏಕಪೀಠ ನ್ಯಾಯಾಧೀಶರು ಈ ವಿಷಯದಲ್ಲಿ ಸರಿಯಾದ ವಿಚಾರಣೆ ನಡೆಸಿಲ್ಲ ಎಂದು ವಾದಿಸಿದರು. ಆದರೆ ದೆಹಲಿ ಹೈಕೋರ್ಟ್ ಈ ಯಾವ ವಾದಗಳನ್ನು ಪರಿಗಣಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com