ತೀವ್ರ ವಿರೋಧ: ಮುಸ್ಲಿಂ ಹುಡುಗನೊಂದಿಗೆ ಮಗಳ ಮದುವೆ ನಿಲ್ಲಿಸಿದ ಬಿಜೆಪಿ ನಾಯಕ!

ಇತ್ತೀಚೆಗೆ ಉತ್ತರಾಖಂಡದ ಬಿಜೆಪಿ ಮುಖಂಡರೊಬ್ಬರ ಮಗಳ ಮದುವೆಗೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕಾರ್ಡ್ ವೈರಲ್ ಆಗಿದ್ದಲ್ಲದೆ, ಅದರ ಮೇಲೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಇತ್ತೀಚೆಗೆ ಉತ್ತರಾಖಂಡದ ಬಿಜೆಪಿ ಮುಖಂಡರೊಬ್ಬರ ಮಗಳ ಮದುವೆಗೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕಾರ್ಡ್ ವೈರಲ್ ಆಗಿದ್ದಲ್ಲದೆ, ಅದರ ಮೇಲೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. 

ಬಿಜೆಪಿ ಮುಖಂಡ ಯಶ್ಪಾಲ್ ಬೇನಂ ಮಗಳ ಮದುವೆ ಮುಸ್ಲಿಂ ಹುಡುಗನೊಂದಿಗೆ ನಿಶ್ಚಯವಾಗಿರುವುದು ಗಲಾಟೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಬಿಜೆಪಿ ನಾಯಕರು ಹಾಗೂ ಪಕ್ಷವನ್ನು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. ಮೇ 28ರಂದು ಮದುವೆ ನಡೆಯಬೇಕಿತ್ತು. ಆದರೆ ಸದ್ಯ ಈ ಮದುವೆ ನಡೆಯುತ್ತಿಲ್ಲ.

26, 27 ಮತ್ತು 28 ರಂದು ಯಾವುದೇ ನಿಶ್ಚಿತ ವಿವಾಹ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಯಶ್ಪಾಲ್ ಬೇನಮ್ ಮೇ 20ರಂದು ಮಾಹಿತಿ ನೀಡಿದರು. ಬಿಜೆಪಿ ನಾಯಕ ತನ್ನ ಮಗಳ ಸಂತೋಷಕ್ಕಾಗಿ ಮುಸ್ಲಿಂ ಹುಡುಗನೊಂದಿಗೆ ಮದುವೆಗೆ ಒಪ್ಪಿಕೊಂಡಿದ್ದಾಗಿ ಎಂದು ಹೇಳಿಕೊಂಡಿದ್ದಾರೆ.

ಜನಪ್ರತಿನಿಧಿಗಳಾಗಿ ಪೊಲೀಸರ ನೆರಳಿನಲ್ಲಿ ಮದುವೆಯಾಗುವುದು ಸರಿಯಲ್ಲ ಎಂದು ಎರಡೂ ಕುಟುಂಬಗಳು ಸದ್ಯ ವಾತಾವರಣ ಅನುಕೂಲಕರವಾಗಿಲ್ಲ. ಹೀಗಾಗಿ  ಮದುವೆ ಕಾರ್ಯಕ್ರಮಗಳನ್ನು ಮಾಡದಿರಲು ಎಂದು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com