ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಸಿವಿನಿಂದ ಹುಲಿ ಸಾವು

ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಖ್ರೋ ರೇಂಜ್ ನಲ್ಲಿ ಹೆಣ್ಣು ಹುಲಿಯೊಂದು ಹಸಿವಿನಿಂದ ಸಾವನ್ನಪ್ಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಖ್ರೋ ರೇಂಜ್ ನಲ್ಲಿ ಹೆಣ್ಣು ಹುಲಿಯೊಂದು ಹಸಿವಿನಿಂದ ಸಾವನ್ನಪ್ಪಿದೆ.

ಶನಿವಾರ ತಡರಾತ್ರಿ ಬಂದ ಮರಣೋತ್ತರ ಪರೀಕ್ಷೆಯ ವರದಿಯು ಹೆಣ್ಣು ಹುಲಿ "ಹಸಿವಿನಿಂದ" ಸಾವನ್ನಪ್ಪಿದೆ ಎಂದು ದೃಢಪಡಿಸಿದೆ.

ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಉತ್ತರಾಖಂಡದ ಮುಖ್ಯ ವನ್ಯಜೀವಿ ವಾರ್ಡನ್ ಡಾ ಸಮೀರ್ ಸಿನ್ಹಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. 

ಈ ಹುಲಿಗೆ ತುಂಬಾ ವಯಸ್ಸಾಗಿತ್ತು ಮತ್ತು ದುರ್ಬಲವಾಗಿತ್ತು. ಹೀಗಾಗಿ ಉಳಿಸಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ವಯಸ್ಸಾದ ಕಾರಣ ಬೇಟೆಯನ್ನು ಅರಸಿ ಹೆಚ್ಚು ನಡೆಯಲು ಸಾಧ್ಯವಾಗದೆ ಹಸಿವಿನಿಂದ ಮೂರ್ಛೆ ಹೋಗಿದೆ ಎಂದು ಕಲಗಢ್ ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್‌ಒ) ನೀರಜ್ ಶರ್ಮಾ ತಿಳಿಸಿದ್ದಾರೆ.

"ಈ ಹುಲಿಗೆ ಮೊದಲು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಧೇಲಾ ಪಾರುಗಾಣಿಕಾ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಹುಲಿ ಸಾವನ್ನಪ್ಪಿತು" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com