ಚೆನ್ನೈನಿಂದ ಬನ್ನೇರುಘಟ್ಟಕ್ಕೆ ಗಂಡು ಬಿಳಿ ಹುಲಿ ರವಾನೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದ (ಬಿಬಿಪಿ) ಆಡಳಿತ ಮಂಡಳಿಯು ಒಂಟಿ ಬಿಳಿ ಹೆಣ್ಣು ಹುಲಿಗೆ ಸಾಥ್ ನೀಡಲು ಮತ್ತು ಈ ಅಲ್ಬಿನೋ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಚೆನ್ನೈನಿಂದ ಒಂದು ವಾರದಲ್ಲಿ ಗಂಡು ಬಿಳಿ ಹುಲಿಯನ್ನು ತರಲಾಗುತ್ತಿದೆ.
ಬಿಳಿ ಹುಲಿ (ಸಂಗ್ರಹ ಚಿತ್ರ)
ಬಿಳಿ ಹುಲಿ (ಸಂಗ್ರಹ ಚಿತ್ರ)

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದ (ಬಿಬಿಪಿ) ಆಡಳಿತ ಮಂಡಳಿಯು ಒಂಟಿ ಬಿಳಿ ಹೆಣ್ಣು ಹುಲಿಗೆ ಸಾಥ್ ನೀಡಲು ಮತ್ತು ಈ ಅಲ್ಬಿನೋ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಚೆನ್ನೈನಿಂದ ಒಂದು ವಾರದಲ್ಲಿ ಗಂಡು ಬಿಳಿ ಹುಲಿಯನ್ನು ತರಲಾಗುತ್ತಿದೆ.

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಹಕ್ಕೆ ಬದಲಾಗಿ ಮೂರು ವರ್ಷದ ಗಂಡು ಹುಲಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗುತ್ತಿದೆ. ಕ್ವಾರಂಟೈನ್ ಪ್ರಕ್ರಿಯೆಗಳ ನಂತರ ಅದನ್ನು ಹುಲಿ ಸಫಾರಿ ಪ್ರದೇಶದಲ್ಲಿ ಇರಿಸಲಾಗುವುದು ಎಂದು BBP ನಿರ್ದೇಶಕ ಸುನಿಲ್ ಪನ್ವಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. 

"ಗಂಡು ಹುಲಿ ಮುಂದಿನ ಶುಕ್ರವಾರ BBP ಗೆ ಆಗಮಿಸುತ್ತದೆ. ಆರರಿಂದ ಏಳು ವರ್ಷದ ಒಂಟಿ ಹೆಣ್ಣು ಬಿಳಿ ಹುಲಿಗೆ ಸಂಗಾತಿಯಾಗಲು ಈ ಗಂಡು ಹುಲಿಯನ್ನು ತರಲಾಗುತ್ತಿದೆ. ಅವರ ಹೊಂದಾಣಿಕೆ ಹೇಗಿರುತ್ತದೆ ಎಂಬುದನ್ನು ನೋಡಬೇಕು ಎಂದು ಅವರು ಹೇಳಿದರು.

ಪ್ರಸ್ತುತ, ಹೆಣ್ಣು ಬಿಳಿ ಹುಲಿಯು ರಾಯಲ್ ಬೆಂಗಾಲ್ ಹುಲಿಯೊಂದಿಗೆ ನಂಟು ಹೊಂದಿದ್ದು, ಗರ್ಭಿಣಿಯಾಗಿರುವ ಶಂಕೆ ಇದೆ ಎಂದು ಮೃಗಾಲಯದ ಪಾಲಕರು ತಿಳಿಸಿದ್ದಾರೆ. "ಹುಟ್ಟುವ ಮರಿಗಳು ಬಿಳಿಯಾಗಿರುತ್ತವೆ, ಆದ್ದರಿಂದ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ನಾವು ಈ ಹಿಂದೆಯೇ ಬಿಳಿ ಹುಲಿ ಮರಿಗಳನ್ನು ಹೊಂದಿದ್ದೆವು. ಆದರೆ ಅವು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಮೃಗಾಲಯವು 17 ಹುಲಿಗಳು, 20 ಸಿಂಹಗಳು ಮತ್ತು 64 ಚಿರತೆಗಳನ್ನು ಹೊಂದಿದೆ (ಇದರಲ್ಲಿ 50 ರಕ್ಷಿಸಲಾಗಿದೆ). ರಕ್ಷಿಸಲ್ಪಟ್ಟ ಎಲ್ಲ ಚಿರತೆಗಳನ್ನು ಬಿಬಿಪಿಗೆ ಕರೆತರಲಾಗಿರುವುದರಿಂದ ಇಲ್ಲಿ ಅತಿ ಹೆಚ್ಚು ಚಿರತೆಗಳಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

“ನಾಗರಿಕರು, ರೈತರು, ಕಾರ್ಯಕರ್ತರು ಅಥವಾ ಅರಣ್ಯ ಇಲಾಖೆಯಿಂದ ಚಿರತೆ ಅಥವಾ ಮರಿಯನ್ನು ರಕ್ಷಿಸಿ ಅವೆಲ್ಲವನ್ನೂ ಬಿಬಿಪಿಗೆ ತರಲಾಗುತ್ತದೆ. ನಾವು ಅವುಗನ್ನು ಪಾರುಗಾಣಿಕಾ ಕೇಂದ್ರದಲ್ಲಿ ಮತ್ತು ಜನರಿಂದ ದೂರವಿರುವ ಆವರಣಗಳಲ್ಲಿ ಇರಿಸುತ್ತಿದ್ದೇವೆ. ಏಕೆಂದರೆ ಕೇಂದ್ರ ಮೃಗಾಲಯ ಪ್ರಾಧಿಕಾರದ ನಿಯಮಗಳ ಪ್ರಕಾರ ರಕ್ಷಿಸಲ್ಪಟ್ಟ ವನ್ಯಜೀವಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದಿಲ್ಲ. ಮನೆಯಲ್ಲಿ ಹುಟ್ಟಿದ ಚಿರತೆಗಳು ಮಾತ್ರ ಪ್ರದರ್ಶನದಲ್ಲಿವೆ. ನಮ್ಮ ಚಿರತೆಗಳನ್ನು ಬಿಟ್ಟುಕೊಡಲು ನಾವು ಉತ್ಸುಕರಾಗಿದ್ದೇವೆ, ಆದರೆ ಹೆಚ್ಚುತ್ತಿರುವ ರಕ್ಷಣಾ ಕಾರ್ಯಾಚರಣೆಗಳು ಮತ್ತು ಅವುಗಳ ಸ್ವಭಾವದಿಂದಾಗಿ, ಮೃಗಾಲಯದ ನಿರ್ವಹಣೆಗಳು ತಮ್ಮ ಆವರಣದಲ್ಲಿ ಹೆಚ್ಚು ಚಿರತೆಗಳನ್ನು ಇರಿಸಲು ಹಿಂಜರಿಯುವಂತೆ ಮಾಡಿವೆ ಎಂದು ಅಧಿಕಾರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com