ಹಳ್ಳಕ್ಕೆ ಬಿದ್ದ 4 ಕಾಡಾನೆಗಳು: ಅರಣ್ಯ ಇಲಾಖೆ ಹರಸಾಹಸದ ಬಳಿಕ ಆನೆಗಳು ಸುರಕ್ಷಿತವಾಗಿ ಕಾಡಿಗೆ!

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಬುಧವಾರ ರಾತ್ರಿ ನೀರು ಅರಸಿ ಬಂದು ಕೆರೆಗೆ ಬಿದ್ದಿದ್ದ ನಾಲ್ಕು ಕಾಡಾನೆಗಳ ಹಿಂಡನ್ನು ಅರಣ್ಯಾಧಿಕಾರಿಗಳು ಗುರುವಾರ ರಕ್ಷಿಸಿದ್ದಾರೆ.
ಹಳ್ಳಕ್ಕೆ ಬಿದ್ದ ಆನೆ ಹಿಂಡು
ಹಳ್ಳಕ್ಕೆ ಬಿದ್ದ ಆನೆ ಹಿಂಡು
Updated on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಬುಧವಾರ ರಾತ್ರಿ ನೀರು ಅರಸಿ ಬಂದು ಕೆರೆಗೆ ಬಿದ್ದಿದ್ದ ನಾಲ್ಕು ಕಾಡಾನೆಗಳ ಹಿಂಡನ್ನು ಅರಣ್ಯಾಧಿಕಾರಿಗಳು ಗುರುವಾರ ರಕ್ಷಿಸಿದ್ದಾರೆ.

ಸನತ್ ರೈ ಎಂಬುವವರ  ಒಡೆತನದ ಅಡಿಕೆ ತೋಟದಲ್ಲಿ ಎರಡು ಮರಿಗಳಿದ್ದ ಆನೆ ಹಿಂಡು ಹೊಂಡಕ್ಕೆ ಬಿದ್ದಿದೆ. ಪ್ರಾಣಿಗಳನ್ನು ಗಮನಿಸಿದ ಸನತ್ ಮತ್ತು ಇತರ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಗುರುವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್, ಮೊದಲು ಆನೆ ಮರಿ ಒಂದು ಕೆರೆಯಲ್ಲಿ ಬಿದ್ದು ಕೆಸರಿನಲ್ಲಿ ಸಿಲುಕಿದೆ. ಬಳಿಕ ಮರಿಯನ್ನು ರಕ್ಷಿಸಲು, ಆನೆಗಳು ಕೊಳವನ್ನು ಪ್ರವೇಶಿಸಿರಬಹುದು, ಆದರೆ ಮತ್ತೆ ಏರಲು ವಿಫಲವಾಗಿವೆ. ಅಥವಾ ಹಿಂಡು ಕೆರೆಯಲ್ಲಿ ದಾಹ ನೀಗಿಸಿಕೊಳ್ಳಲು ಯತ್ನಿಸಿ ಸಿಲುಕಿಕೊಂಡಿರಬಹುದು’ ಎಂದು ಹೇಳಿದ್ದಾರೆ.

“ನಾವು ಆನೆಗಳನ್ನು ಹಳ್ಳದ ಗಡಿಯ ಒಂದು ಭಾಗವನ್ನು ಜೆಸಿಬಿ ಬಳಸಿ ಒಡೆದು ಕೊಳದಿಂದ ಹೊರಬರಲು ಸಹಾಯ ಮಾಡಿದೆವು. ಆನೆಗಳಲ್ಲಿ ಒಂದು ಆರಂಭದಲ್ಲಿ ಕೊಳದ ಹೊರಗೆ ಏರಲು ಯಶಸ್ವಿಯಾಯಿತು. ನಂತರ, ಮತ್ತೊಂದು ವಯಸ್ಕ ಆನೆ ಮತ್ತು ಒಂದು ಮರಿ ಕೂಡ ಸುರಕ್ಷಿತವಾಗಿ ಹೊರಬಂದವು. ಆದರೆ, ಒಂದು ಮರಿ ನೀರಿನಲ್ಲಿ ಸಿಲುಕಿಕೊಂಡಿದ್ದು, ನಂತರ ಅದನ್ನು ರಕ್ಷಿಸಿದೆವು. ಅದನ್ನು ಹಿಂಡಿನೊಂದಿಗೆ ಮತ್ತೆ ಸೇರಿಸುತ್ತೇವೆ’ ಎಂದು ಪ್ರವೀಣ್ ಹೇಳಿದರು. ಇದೇ ವೇಳೆ ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಷಯ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ಆರಂಭಿಸಿದರು.‌ ಕೆರೆಯಿಂದ ರಸ್ತೆ ನಿರ್ಮಿಸಿದರೆ ಆನೆಗಳು ಕೆರೆಯಿಂದ ಮೇಲೆ ಬರುತ್ತವೆ. ಆ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ಜೆಸಿಬಿ ತರಿಸಿ ಕೆರೆಯ ಒಂದು ದಡವನ್ನು ಅಗಲ ಮಾಡಿ ಆನೆಗಳು ಮೇಲೆ ಬರಲು ದಾರಿ ಮಾಡಿಕೊಡಲು ಪ್ರಯತ್ನಿಸಲಾಯಿತು.  ಎಂದು ಆರ್‌ಎಫ್‌ಒ ಮಂಜುನಾಥ್ ತಿಳಿಸಿದ್ದಾರೆ.

ಸುಳ್ಯದ ಅಜ್ಜಾವರ, ಮಂಡೆಕೋಲು ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಕಾಡಾನೆಗಳು ತೋಟ ಹಾಗೂ ಗದ್ದೆಗಳಿಗೆ ನುಗ್ಗುತ್ತಿವೆ. ಈ ಹಾವಳಿಯನ್ನು ತಗ್ಗಿಸುವಂತೆ ಸುತ್ತಲಿನ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಕೇಳಿದ್ದಾರೆ. ಅಲ್ಲದೆ, ಈಗ ಅಜ್ಜಾವರ ಬಳಿಯ ಕೆರೆಯಲ್ಲಿ ಸಿಲುಕಿರುವ ಆನೆಗಳನ್ನು ಸೆರೆ ಹಿಡಿದು ಆನೆ ಬಿಡಾರಗಳಿಗೆ ಸಾಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com