ವಿಚ್ಛೇದನಕ್ಕೆ ಪತಿ-ಪತ್ನಿ ಇಬ್ಬರ ಸಮ್ಮತಿಯೂ ಅಗತ್ಯ: ಹೈಕೋರ್ಟ್

ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಪತಿ ಅಥವಾ ಪತ್ನಿ ಪೈಕಿ ಯಾರಾದರೂ ಒಬ್ಬರು ಹಿಂದೆ ಸರಿದ ವೇಳೆ ವಿಚ್ಛೇದನಕ್ಕೆ ಅನುಮತಿ ನೀಡಲಾಗದು ಎಂದು ಕೇರಳ ಹೈಕೋರ್ಟ್ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿನ್: ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆಯಲು ಮುಂದಾದ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಪತಿ ಅಥವಾ ಪತ್ನಿ ಪೈಕಿ ಯಾರಾದರೂ ಒಬ್ಬರು ಹಿಂದೆ ಸರಿದ ವೇಳೆ ವಿಚ್ಛೇದನಕ್ಕೆ ಅನುಮತಿ ನೀಡಲಾಗದು ಎಂದು ಕೇರಳ ಹೈಕೋರ್ಟ್ ಹೇಳಿದೆ.

2010ರ ಮೇ ತಿಂಗಳಿನಲ್ಲಿ ವಿವಾಹಿತರಾಗಿದ್ದ ದಂಪತಿಗಳು 2019ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಗನ ಹಿತದೃಷ್ಟಿಯಿಂದ ಮಹಿಳೆ, ವಿಚ್ಛೇದನಕ್ಕೆ ತಾನು ಸೂಚಿಸಿದ್ದ ಒಪ್ಪಿಗೆಯಿಂದ ಹಿಂದೆ ಸರಿದಿದ್ದು ಇದಕ್ಕೆ ನನ್ನ ಸಮ್ಮತಿ ಇಲ್ಲ ಎಂದಿದ್ದರು. ಇದನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು.

ಆದರೆ ಮಹಿಳೆಯ ಪತಿ ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚ್ಛೇದನಕ್ಕೆ ಮೊದಲು ಒಪ್ಪಿಗೆ ಸೂಚಿಸಿ ಬಳಿಕ ಹಿಂದೆ ಸರಿದಿರುವುದರಿಂದ ಅರ್ಜಿ ವಜಾಗೊಳಿಸಿದ್ದು ಕಾನೂನು ಬಾಹಿರ ಎಂದು ವಾದಿಸಿದ್ದರು. ಇದೀಗ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿರುವ ಕೇರಳ ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ಪರಸ್ಪರ ವಿಚ್ಛೇದನಕ್ಕೆ ಇಬ್ಬರ ಸಮ್ಮತಿಯೂ ಅಗತ್ಯ ಎಂದು ಅಭಿಪ್ರಾಯ ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com