ದೆಹಲಿಯನ್ನು ಸುಡುತ್ತಿದೆ ಬಿಸಿಲ ಝಳ: 46 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣಾಂಶ  

ರಾಷ್ಟ್ರ ರಾಜಧಾನಿ ದೆಹಲಿಯನ್ನು ಬಿಸಿಲ ಝಳ ಸುಡುತ್ತಿದ್ದು, ಬಿಸಿಗಾಳಿ ಬೀಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಪಮಾನ
ತಾಪಮಾನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬಿಸಿಲ ಝಳ ಸುಡುತ್ತಿದ್ದು, ಬಿಸಿಗಾಳಿ ಬೀಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹವಾಮಾನ ಇಲಾಖೆ ದಿನದ ಅಂತ್ಯದಲ್ಲಿ ಮಳೆ, ತುಂತುರು ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದರೆ, ದೆಹಲಿಯ ಕೆಲವು ಭಾಗಗಳಲ್ಲಿ ಉಷ್ಣಾಂಶ ಈಗಾಗಲೇ 46 ಡಿಗ್ರಿ ಸೆಲ್ಷಿಯಸ್ ನ್ನು ತಲುಪಿದೆ.

ದೆಹಲಿಯಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ದಾಖಲಾದ ಕನಿಷ್ಠ ತಾಪಮಾನವೇ 29.8 ಡಿಗ್ರಿ ಸೆಲ್ಷಿಯಸ್ ಆಗಿದ್ದು, ಇಲ್ಲಿನ ಸಾಮಾನ್ಯ ತಾಪಮಾನಕ್ಕಿಂತ ಇದು ಮೂರು ಪಟ್ಟು ಹೆಚ್ಚಾದ ತಾಪಮಾನವಾಗಿದೆ.

ಬೆಳಿಗ್ಗೆ 8.30 ರ ವೇಳೆಗೆ ತೇವಾಂಶ ಶೇ.38 ರಷ್ಟಿತ್ತು. ತಾಪಮಾನ 43 ಡಿಗ್ರಿಗಳಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂದಾಜಿಸಿತ್ತಾದರೂ, ನಜಾಫ್ಗಢದಲ್ಲಿ 46.2 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದ್ದು, ನರೇಲಾ ದಲ್ಲಿ 45.3 ಡಿಗ್ರಿ ಸೆಲ್ಸಿಯಸ್ ಪಿತಾಂಪುರ ದಲ್ಲಿ 45.8 ಡಿಗ್ರಿ ಸೆಲ್ಸಿಯಸ್ ಮತ್ತು ಪೂಸಾ ದಲ್ಲಿ 45.8 ಡಿಗ್ರಿ ಸೆಲ್ಸಿಯಸ್ ಹೀಟ್‌ವೇವ್ (heatwave) ಪರಿಸ್ಥಿತಿ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com