ಕರ್ನಾಟಕದ ಪುರೋಹಿತರಿಂದ ನಾಳೆ ಸಂಸತ್ ಭವನ ಉದ್ಘಾಟನೆ ವಿಧಿವಿಧಾನ

ನಾಳೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಇಂದು ಸಂಜೆಯಿಂದ ಸಂಸತ್ ಭವನದಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.
ಸೆಂಟ್ರಲ್ ದೆಹಲಿಯಲ್ಲಿರುವ ನೂತನ ಸಂಸತ್ ಭವನ
ಸೆಂಟ್ರಲ್ ದೆಹಲಿಯಲ್ಲಿರುವ ನೂತನ ಸಂಸತ್ ಭವನ

ನವದೆಹಲಿ: ನಾಳೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಇಂದು ಸಂಜೆಯಿಂದ ಸಂಸತ್ ಭವನದಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.

ಶೃಂಗೇರಿಯ ಶಾರದಾ ಪೀಠದಿಂದ ಪುರೋಹಿತರು, ವಿದ್ವಾಂಸರ ನೇತೃತ್ವದಲ್ಲಿ ಸಂಸತ್ ಭವನ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ. ಶೃಂಗೇರಿ ಮಠದ ವಿದ್ವಾಂಸರಾದ ಸೀತಾರಾಮ ಶರ್ಮ, ರಾಮ ಶರ್ಮ,ಲಕ್ಷ್ಮೀಶ ತಂತ್ರಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.

ಈ ಹಿಂದೆ ಸಂಸತ್ ಭವನದ ಮೇಲೆ ಲಾಂಛನ ಲೋಕಾರ್ಪಣೆ, ನೂತನ ಸಂಸತ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮಗಳ ಧಾರ್ಮಿಕ ವಿಧಿವಿಧಾನಗಳೂ ಕರ್ನಾಟಕದ ಶೃಂಗೇರಿಯ ಪುರೋಹಿತರು, ವಿದ್ವಾಂಸರ ನೇತೃತ್ವದಲ್ಲಿ ನಡೆದಿತ್ತು.

ಇನ್ನು ರಾಜದಂಡ (ಸೆಂಗೋಲ್) ನ್ನು ಅಧೀನಂ ಸಾಧು-ಸಂತರ ತಂಡ ಪ್ರಧಾನಿಗೆ ಇಂದು ಹಸ್ತಾಂತರಿಸಿದ್ದು, ಅದನ್ನು ನಾಳೆ ಸಂಸತ್ ನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com