ರಾಜಸ್ಥಾನ ಚುನಾವಣೆ: ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ

ಧೋಲ್‌ಪುರದ ಬ್ಯಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಿರ್ರಾಜ್ ಮಾಲಿಂಗ ಅವರು ಭಾನುವಾರ ಜೈಪುರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಇತರರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಗಿರ್ರಾಜ್ ಮಾಲಿಂಗ - ಗಜೇಂದ್ರ ಸಿಂಗ್ ಶೇಖಾವತ್
ಗಿರ್ರಾಜ್ ಮಾಲಿಂಗ - ಗಜೇಂದ್ರ ಸಿಂಗ್ ಶೇಖಾವತ್

ಜೈಪುರ: ರಾಜಸ್ಥಾನದ ಧೋಲ್‌ಪುರದ ಬ್ಯಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಿರ್ರಾಜ್ ಮಾಲಿಂಗ ಅವರು ಭಾನುವಾರ ಜೈಪುರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಇತರರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಬಿಜೆಪಿ ಸದಸ್ಯತ್ವ ಪಡೆದ ಬಳಿಕ ಮಾತನಾಡಿದ ಮಾಲಿಂಗ ಅವರು, ಕಾಂಗ್ರೆಸ್‌ನಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದ್ದು, ಸಿಎಂ ಒತ್ತಡದ ರಾಜಕಾರಣದಿಂದ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಕಳೆದ ವರ್ಷ ಮಾರ್ಚ್‌ನಲ್ಲಿ ಧೋಲ್‌ಪುರ ಜಿಲ್ಲೆಯ ವಿದ್ಯುತ್ ಇಲಾಖೆಯ ಬ್ಯಾರಿ ಕಚೇರಿಯಲ್ಲಿ ಇಬ್ಬರು ಎಂಜಿನಿಯರ್‌ಗಳ ಮೇಲೆ ಹಲ್ಲೆ ನಡೆಸಿದ ನಂತರ ಮಾಲಿಂಗ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನಂತರ ಜೈಪುರದ ಪೊಲೀಸ್ ಕಮಿಷನರ್ ಮುಂದೆ ಶರಣಾದ ಮಾಲಿಂಗ ಅವರನ್ನು ಬಂಧಿಸಲಾಗಿತ್ತು.

ಇಂಜಿನಿಯರ್‌ಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನನ್ನನ್ನು ಆರೋಪಿಯನ್ನಾಗಿಸಿ ಎಫ್‌ಐಆರ್‌ ದಾಖಲಿಸಿದ್ದು, ಅದರಲ್ಲಿಯೂ ರಾಜಕೀಯವಿದೆ ಎಂದು ದೂರಿದ್ದಾರೆ.

ಈ ವಿಚಾರವಾಗಿ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಕೇಳಿಕೊಂಡಿದ್ದೆ. ನಾನು ಕಾಂಗ್ರೆಸ್‌ ಶಾಸಕನಾಗಿದ್ದರೂ ಮುಖ್ಯಮಂತ್ರಿಗಳು ನನ್ನ ಮಾತಿಗೆ ಕಿವಿಗೊಡಲಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com