ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ ಸೇರಿ ಭಾರತದ 3 ನಗರಗಳು, ಕಳಪೆ ಗಾಳಿ ಗುಣಮಟ್ಟದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ

ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶದ ಒಟ್ಟು 3 ನಗರಗಳು ಸ್ಥಾನ ಪಡೆದಿದ್ದು, ಜಗತ್ತಿನ ಕಳಪೆ ಗಾಳಿ ಗುಣಮಟ್ಟ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ ಲಭಿಸಿದೆ.
ದೆಹಲಿಯಲ್ಲಿ ವಾಯುಮಾಲಿನ್ಯ
ದೆಹಲಿಯಲ್ಲಿ ವಾಯುಮಾಲಿನ್ಯ

ನವದೆಹಲಿ: ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶದ ಒಟ್ಟು 3 ನಗರಗಳು ಸ್ಥಾನ ಪಡೆದಿದ್ದು, ಜಗತ್ತಿನ ಕಳಪೆ ಗಾಳಿ ಗುಣಮಟ್ಟ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ ಲಭಿಸಿದೆ.

ಸ್ವಿಸ್ ಗ್ರೂಪ್ IQAir ಸಂಗ್ರಹಿಸಿದ ವಿಶ್ವದ ಅತ್ಯಂತ ಕಲುಷಿತ ನಗರಗಳ ನೈಜ-ಸಮಯದ ಪಟ್ಟಿಯಲ್ಲಿ ರಾಜಧಾನಿ ದೆಹಲಿ ಮತ್ತೆ ಅಗ್ರಸ್ಥಾನದಲ್ಲಿದ್ದು, ಇದು ಶುಕ್ರವಾರದಂದು "ಅಪಾಯಕಾರಿ" ವಿಭಾಗದಲ್ಲಿ ಭಾರತದ ರಾಜಧಾನಿಯ AQI ಅನ್ನು 640 ರಲ್ಲಿ ಇರಿಸಿದೆ, ಪಾಕಿಸ್ತಾನದ ಲಾಹೋರ್‌ನಲ್ಲಿ ನಂತರದ ಸ್ಥಾನದಲ್ಲಿದ್ದು ಇಲ್ಲಿ AQI 335ರಷ್ಟಿದೆ. ಕೋಲ್ಕತ್ತಾ ಮತ್ತು ಮುಂಬೈ ಕೂಡAQI ಕ್ರಮವಾಗಿ 206 ಮತ್ತು 162ದೊಂದಿಗೆ ವಾಯುಮಾಲಿನ್ಯದಿಂದ ಹೆಚ್ಚು ಹಾನಿಗೊಳಗಾದ 5 ನಗರಗಳಲ್ಲಿ ಸ್ಥಾನ ಪಡೆದಿವೆ. 2022 ರಲ್ಲಿ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.

ಪ್ರಾದೇಶಿಕ ಅಧಿಕಾರಿಗಳು ಕಡಿಮೆ ತಾಪಮಾನದ ಋತುಮಾನದ ಸಂಯೋಜನೆ, ಗಾಳಿಯ ಕೊರತೆ ಮತ್ತು ನೆರೆಯ ಕೃಷಿ ರಾಜ್ಯಗಳಲ್ಲಿ ಸುಡುವ ಬೆಳೆ ತ್ಯಾಜ್ಯಗಳು ವಾಯು ಮಾಲಿನ್ಯಕಾರಕಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಅಂತೆಯೇ ದೆಹಲಿಯಲ್ಲಿ AQI ಮಟ್ಟ 480ರ ಆಸುಪಾಸಿನಲ್ಲಿ ಸುಳಿದಾಡಿದ್ದರಿಂದ ರಾಜಧಾನಿಯ 20 ಮಿಲಿಯನ್ ನಿವಾಸಿಗಳಲ್ಲಿ ಅನೇಕರು ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಗಂಟಲಿನ ತುರಿಕೆಯ ಬಗ್ಗೆ ದೂರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ AQI 0 ಯಿಂದ 50ರವರೆಗಿನ ಮಟ್ಟವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ 400-500 ನಡುವಿನ ಮಟ್ಟವನ್ನು ಯಾವುದೇ ಆರೋಗ್ಯವು ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರುವ ಕಳಪೆ ಹಂತವಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅಸ್ತಿತ್ವದಲ್ಲಿರುವ ರೋಗಗಳಿರುವವರಿಗೆ ಈ ಮಟ್ಟ ಅಪಾಯವಾಗಿರುತ್ತದೆ ಎಂದು ರಾಯಿಟರ್ಸ್ ಸೇರಿಸಲಾಗಿದೆ. ದೆಹಲಿ ಗಾಳಿಯ ಗುಣಮಟ್ಟದಲ್ಲಿ ಯಾವುದೇ ತಕ್ಷಣದ ಸುಧಾರಣೆ ಕಂಡುಬಂದಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ತಿಳಿಸಿದೆ. 

ಏತನ್ಮಧ್ಯೆ, ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿಯ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 10 ರವರೆಗೆ ಮುಚ್ಚಲಾಗುವುದು ಎಂದು ದೆಹಲಿ ಶಿಕ್ಷಣ ಸಚಿವ ಅತಿಶಿ ಭಾನುವಾರ ಪ್ರಕಟಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. 6 ರಿಂದ 12 ನೇ ತರಗತಿಗಳಿಗೆ, ಶಾಲೆಗಳು ಆನ್‌ಲೈನ್‌ನಲ್ಲಿ ಕಲಿಸುವ ಆಯ್ಕೆಯನ್ನು ಹೊಂದಿವೆ. "ಮಾಲಿನ್ಯ ಮಟ್ಟವು ಹೆಚ್ಚಾಗಿರುವುದರಿಂದ, ದೆಹಲಿಯ ಪ್ರಾಥಮಿಕ ಶಾಲೆಗಳು ನವೆಂಬರ್ 10 ರವರೆಗೆ ಮುಚ್ಚಲ್ಪಡುತ್ತವೆ. 6-12 ನೇ ತರಗತಿಗಳಿಗೆ, ಶಾಲೆಗಳಿಗೆ ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಆಯ್ಕೆಯನ್ನು ನೀಡಲಾಗುತ್ತಿದೆ" ಎಂದು ದೆಹಲಿ ಸಚಿನೆ ಅತಿಶಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com