ಗುಜರಾತ್: ಮಹಿಳೆ, ಇಬ್ಬರು ಮಕ್ಕಳು, ಅತ್ತೆ ಆತ್ಮಹತ್ಯೆಗೆ ಶರಣು; ಪತಿ ಬಂಧನ

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದಲ್ಲಿ 30 ವರ್ಷದ ಮಹಿಳೆ, ಆಕೆಯ ಇಬ್ಬರು ಮಕ್ಕಳು ಮತ್ತು 55 ವರ್ಷದ ಅತ್ತೆ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಲನ್‌ಪುರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದಲ್ಲಿ 30 ವರ್ಷದ ಮಹಿಳೆ, ಆಕೆಯ ಇಬ್ಬರು ಮಕ್ಕಳು ಮತ್ತು 55 ವರ್ಷದ ಅತ್ತೆ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಶನಿವಾರ ಸಂಜೆ ಈ ದಾರಣ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ತಮ್ಮ ಪತಿಯಂದಿರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಪ್ರಾಥಮಿಕ ತನಿಖೆಯ ಪ್ರಕಾರ, ನಯನಾ ಚೌಹಾಣ್ ಮತ್ತು ಆಕೆಯ ಅತ್ತೆ ಕನುಬಾ ಚೌಹಾಣ್ ಅವರು ತಮ್ಮ ಪತಿಯಂದಿರಾದ ನರಸಿಂಹ ಮತ್ತು ಗೆನ್ಸಿನ್ಹ್ ಚೌಹಾಣ್ ಅವರ ನಿರಂತರ ಚಿತ್ರಹಿಂಸೆ ಮತ್ತು ಕಿರುಕುಳದಿಂದಾಗಿ ಈ ತೀವ್ರವಾದ ಕ್ರಮ ತೆಗೆದುಕೊಂಡಿದ್ದಾರೆ" ಎಂದು ಪಾಲನ್‌ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎವಿ ದೇಸಾಯಿ ಹೇಳಿದ್ದಾರೆ.

"ನಯನಾ ಅವರ ಸಹೋದರ ಪ್ರವಿನ್‌ಸಿನ್ಹ್ ವಘೇಲಾ ಅವರ ದೂರಿನ ಆಧಾರದ ಮೇಲೆ, ನರಸಿಂಹ ಮತ್ತು ಗೆನ್ಸಿನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಹಲ್ಲೆ ಮತ್ತು ಇತರ ಅಪರಾಧಗಳಿಗಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಗೆನ್ಸಿನ್ ನನ್ನು ಬಂಧಿಸಲಾಗಿದ್ದು, ನರಸಿಂಹ ಪರಾರಿಯಾಗಿದ್ದಾನೆ" ಎಂದು ಅವರು ತಿಳಿಸಿದ್ದಾರೆ.

ನಯ್ನಾ, ಅವರ ಮಗಳು ಸಪ್ನಾ(8) ಮತ್ತು ಮಗ ವೀರಮ್ (5) ಹಾಗೂ ಕನೂಬಾ ಅವರು ಯಾರಿಗೂ ತಿಳಿಸದೆ ಶನಿವಾರ ಬೆಳಗ್ಗೆ ನಾಣಿ ಭಟಮಾಲ್ ಗ್ರಾಮದ ತಮ್ಮ ಮನೆಯಿಂದ ಹೊರಟಿದ್ದರು. 

ಸಂಜೆಯಾದರೂ ಅವರು ಮನೆಗೆ ಹಿಂತಿರುಗದಿದ್ದಾಗ, ಅವರ ಸಂಬಂಧಿಕರು ಹುಡುಕಾಟ ನಡೆಸಿದರು ಮತ್ತು ನಂತರ ಗ್ರಾಮದ ಬಳಿಯ ದಾಂತಿವಾಡ ಜಲಾಶಯದ ಬಳಿ ಅವರ ಪಾದರಕ್ಷೆಗಳು ಪತ್ತೆಯಾಗಿವೆ. ನಂತರ ಸ್ಥಳೀಯ ಮುಳುಗು ತಜ್ಞರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com