ಮಿಜೋರಾಂ ವಿಧಾನಸಭೆ ಚುನಾವಣೆ ಶಾಂತಿಯುತ: ಶೇ. 77 ರಷ್ಟು ಮತದಾನ

40 ಸದಸ್ಯ ಬಲದ ಮಿಜೋರಾಂ ವಿಧಾನಸಭೆ ಚುನಾವಣೆ ಮಂಗಳವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟು 8.57 ಲಕ್ಷ ಮತದಾರರಲ್ಲಿ ಶೇಕಡಾ 77 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಐಜ್ವಾಲ್: 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆ ಚುನಾವಣೆ ಮಂಗಳವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟು 8.57 ಲಕ್ಷ ಮತದಾರರಲ್ಲಿ ಶೇಕಡಾ 77 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರದ ಜಿಲ್ಲೆಗಳಿಂದ ಅಂತಿಮ ವರದಿಗಳು ಇನ್ನೂ ಬರಬೇಕಿರುವುದರಿಂದ ಮತದಾನದ ಶೇಕಡಾವಾರು ಪ್ರಮಾಣವು 80 ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಎಚ್ ಲಿಯಾಂಜೆಲಾ ಅವರು ಹೇಳಿದ್ದಾರೆ.

ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಸಂಜೆ 6 ಗಂಟೆಯ ವರೆಗೆ ಶೇ.77.39 ರಷ್ಟು ಮತದಾನವಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆ ಶೇ.81.61ರಷ್ಟು ಮತದಾನವಾಗಿತ್ತು.

ಇಂದು ಜನ ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತು ಕಾಯುತ್ತಿದ್ದರಿಂದ, 4 ಗಂಟೆಗೆ ಮುಕ್ತಾಗೊಳ್ಳಬೇಕಿದ್ದ ಮತದಾನದ ಸಮಯವನ್ನು ಒಂದು ಗಂಟೆ ಅಂದರೆ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿತ್ತುಎಂದು ಲಿಯಾಂಜೆಲಾ ಅವರು ತಿಳಿಸಿದ್ದಾರೆ.

18 ಮಹಿಳೆಯರು ಸೇರಿದಂತೆ 174 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲಾ 1,276 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ, 

11 ಜಿಲ್ಲೆಗಳಲ್ಲಿ, ಕೇಂದ್ರ ಮಿಜೋರಾಂನ ಸೆರ್ಚಿಪ್ ಅತಿ ಹೆಚ್ಚು ಶೇಕಡಾ 84.49 ರಷ್ಟು ಮತದಾನ ದಾಖಲಿಸಿದೆ. ನಂತರ ಹ್ನಾಹ್ಥಿಯಲ್ (ಶೇ. 84.16) ಮತ್ತು ಖವ್ಜಾಲ್(ಶೇ. 82.39)ನಲ್ಲಿ ಅತಿ ಹೆಚ್ಚು ಮತದಾನವಾಗಿದೆ.

ಐಜ್ವಾಲ್ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡಾ 73.09 ರಷ್ಟು ಮತದಾನವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com