1601 ಕೋಟಿ ರೂ.ಗೆ ಮುಂಬೈನ ಏರ್ ಇಂಡಿಯಾ ಕಟ್ಟಡ ಸ್ವಾಧೀನಕ್ಕೆ ಮಹಾ ಸರ್ಕಾರ ನಿರ್ಧಾರ

ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಐಕಾನಿಕ್ ಏರ್ ಇಂಡಿಯಾ ಕಟ್ಟಡವನ್ನು 1,601 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಬುಧವಾರ ನಿರ್ಧರಿಸಿದೆ.
ಏರ್ ಇಂಡಿಯಾ ಕಟ್ಟಡ
ಏರ್ ಇಂಡಿಯಾ ಕಟ್ಟಡ

ಮುಂಬೈ: ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಐಕಾನಿಕ್ ಏರ್ ಇಂಡಿಯಾ ಕಟ್ಟಡವನ್ನು 1,601 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಬುಧವಾರ ನಿರ್ಧರಿಸಿದೆ.
  
ಇಂದು ಮುಂಬೈನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 250 ಕೋಟಿ ರೂಪಾಯಿ ಅವಾಸ್ತವಿಕ ಆದಾಯ ಮತ್ತು ಆಸ್ತಿ ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕಟ್ಟಡವನ್ನು 1974 ರಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ್ದ ಜಮೀನಿನಲ್ಲಿ ನಿರ್ಮಿಸಲಾಗಿದ್ದು, ಈಗ ರಾಜ್ಯ ಸರ್ಕಾರ ಅದನ್ನು ತನ್ನ ಕಚೇರಿ ಸ್ಥಳಕ್ಕಾಗಿ ಬಳಸಲಿದೆ.

ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯ ಮಂತ್ರಾಲಯದಲ್ಲಿ 2012 ರ ಸಂಭವಿಸಿದ ಅಗ್ನಿ ಅವಘಡದ ನಂತರ ಆ ಕಟ್ಟಡದಲ್ಲಿದ್ದ ನಾಲ್ಕು ಪ್ರಮುಖ ಇಲಾಖೆಗಳು -- ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಶಿಕ್ಷಣ, ನೀರು ಸರಬರಾಜು ಮತ್ತು ನೈರ್ಮಲ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು GT ಆಸ್ಪತ್ರೆಯಿಂದ ಕಾರ್ಯನಿರ್ವಹಿಸುತ್ತಿವೆ.

ಈ ನಾಲ್ಕು ಇಲಾಖೆಗಳನ್ನು ಈಗ 23 ಅಂತಸ್ತಿನ ಏರ್ ಇಂಡಿಯಾ ಕಟ್ಟಡಕ್ಕೆ ಸ್ಥಳಾಂತರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com