ಎಸ್ ಸಿ, ಎಸ್ ಟಿ, ಒಬಿಸಿ ಮೀಸಲಾತಿ: ಶೇ. 50 ರಿಂದ 65 ಕ್ಕೆ ಹೆಚ್ಚಿಸುವ ಮಸೂದೆಗೆ ಬಿಹಾರ ವಿಧಾನಸಭೆ ಅನುಮೋದನೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಈಗಿರುವ ಮೀಸಲಾತಿಯನ್ನು ಶೇ.50ರಿಂದ ಶೇ.65ಕ್ಕೆ ಹೆಚ್ಚಿಸಲು ಬಿಹಾರ ವಿಧಾನಸಭೆ ಗುರುವಾರ ಅನುಮೋದನೆ ನೀಡಿದೆ.
ಸಿಎಂ ನಿತೀಶ್ ಕುಮಾರ್
ಸಿಎಂ ನಿತೀಶ್ ಕುಮಾರ್

ಪಾಟ್ನಾ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಈಗಿರುವ ಮೀಸಲಾತಿಯನ್ನು ಶೇ.50ರಿಂದ ಶೇ.65ಕ್ಕೆ ಹೆಚ್ಚಿಸಲು ಬಿಹಾರ ವಿಧಾನಸಭೆ ಗುರುವಾರ ಅನುಮೋದನೆ ನೀಡಿದೆ. ನಿತೀಶ್ ಕುಮಾರ್ ಸರ್ಕಾರ ನಡೆಸಿದ ಸಮಗ್ರ ಜಾತಿ ಸಮೀಕ್ಷೆಯ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅದೇ ರೀತಿ ಮೀಸಲಾತಿ ಒದಗಿಸುವ ಮಸೂದೆಗಳನ್ನು ಧ್ವನಿ ಮತದ ಮೂಲಕ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಮಸೂದೆಗಳ ಪ್ರಕಾರ, ಎಸ್‌ಸಿಗಳಿಗೆ ಮೀಸಲಾತಿಯನ್ನು ಶೇ. 16 ರಿಂದ ಶೇ. 20 ಕ್ಕೆ ಏರಿಸಲಾಗುತ್ತದೆ. ಎಸ್‌ಟಿ ಮೀಸಲಾತಿಯನ್ನು ಶೇಕಡಾ ಒಂದರಿಂದ ಎರಡಕ್ಕೆ ದ್ವಿಗುಣಗೊಳಿಸಲಾಗುತ್ತಿದೆ. ಒಬಿಸಿಗೆ ಶೇ. 12 ರಿಂದ 15 ರಷ್ಟು, ಇತರೆ ಒಬಿಸಿಗೆ ಶೇ.25 ರಷ್ಟು ಮೀಸಲಾತಿಯನ್ನು ಹೆಚ್ಚಿಸಲಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಉದ್ಯೋಗ, ಮತ್ತಿತರ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಶೇ.  50 ಕ್ಕೆ ಮಿತಿಗೊಳಿಸಿತ್ತು.

ಜಾತಿ-ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ, ಅತ್ಯಂತ ಹಿಂದುಳಿದ ವರ್ಗಗಳ ಉಪಗುಂಪು ಸೇರಿದಂತೆ ಒಬಿಸಿಗಳು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.63 ರಷ್ಟು ಪಾಲನ್ನು ಹೊಂದಿದ್ದರೆ, ಎಸ್‌ಸಿ ಮತ್ತು ಎಸ್‌ಟಿಗಳು ಶೇ. 21ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.  ಬಿಹಾರದಲ್ಲಿ ಸುಮಾರು ಶೇ. 34 ರಷ್ಟು ಕುಟುಂಬಗಳು ರೂ 6,000 ಅಥವಾ ಅದಕ್ಕಿಂತ ಕಡಿಮೆ ಮಾಸಿಕ ಆದಾಯದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಅದೇ ಆದಾಯದಲ್ಲಿ ವಾಸಿಸುವ ಎಸ್ ಸಿ, ಎಸ್ ಟಿ ಕುಟುಂಬಗಳು ಸುಮಾರು 43 ರಷ್ಟಿದೆ.  ಸುಮಾರು 30 ರಷ್ಟು ಕುಟುಂಬಗಳು ತಿಂಗಳಿಗೆ ಕೇವಲ ರೂ. 6,000 ದಿಂದ 10,000 ದೊಳಗೆ ಆದಾಯ ಗಳಿಸುತ್ತಿರುವುದಾಗಿ ವರದಿ ತಿಳಿಸಿದೆ. 

SC/ST ಜನರಲ್ಲಿ ಶೇ. 42.93 ರಷ್ಟು ಎಸ್ ಸಿ ಕುಟುಂಬಗಳು ಮತ್ತು ಶೇ. 42. 72 ರಷ್ಟು ಎಸ್ ಟಿ ಕುಟುಂಬಗಳು ಬಡವರಾಗಿದ್ದಾರೆ. ಅದೇ ರೀತಿ ಶೇ. 33.16 ರಷ್ಟು ಒಬಿಸಿ ಮತ್ತು ಶೇ.33.58 ರಷ್ಟು ಇತರೆ ಒಬಿಸಿಯವರು ಕುಟುಂಬಗಳು ಬಡತನದಲ್ಲಿ ಬದುಕುತ್ತಿದ್ದರೆ, ಸಾಮಾನ್ಯ ವರ್ಗದ ಶೇ.25.09 ಕುಟುಂಬಗಳು ಬಡವರಾಗಿದ್ದಾರೆ. ಸಾಮಾನ್ಯ ವರ್ಗದ ಬಡವರಲ್ಲಿ ಶೇ.27.58 ಭೂಮಿಹಾರ್, ಶೇ.25.3 ಬ್ರಾಹ್ಮಣರು, ಶೇ.24.89 ರಜಪೂತರು ಮತ್ತು ಶೇ.13.83 ಕಾಯಸ್ಥರು ಸೇರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com