ನಿತೀಶ್ ಕುಮಾರ್ ಹೇಳಿಕೆ ತಪ್ಪಾಗಿದ್ದರೆ, ಎನ್ ಸಿಇಆರ್ ಟಿ ಪುಸ್ತಕ ಬದಲಾಯಿಸಿ: ಜೆಡಿಯು

ಜನಸಂಖ್ಯೆ ನಿಯಂತ್ರಿಸಲು ಮಹಿಳಾ ಶಿಕ್ಷಣದ ಮಹತ್ವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಯು ಸಚಿವರು, ಗುರುವಾರ ವಿಧಾನಮಂಡಲದಲ್ಲಿ ಎನ್‌ಸಿಇಆರ್‌ಟಿ ಪುಸ್ತಕಗಳ ಪ್ರತಿಗಳನ್ನು ಪ್ರದರ್ಶಿಸಿದರು.
ಸಿಎಂ ನಿತೀಶ್ ಕುಮಾರ್
ಸಿಎಂ ನಿತೀಶ್ ಕುಮಾರ್

ಪಾಟ್ನಾ: ಜನಸಂಖ್ಯೆ ನಿಯಂತ್ರಿಸಲು ಮಹಿಳಾ ಶಿಕ್ಷಣದ ಮಹತ್ವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಯು ಸಚಿವರು, ಗುರುವಾರ ವಿಧಾನಮಂಡಲದಲ್ಲಿ ಎನ್‌ಸಿಇಆರ್‌ಟಿ ಪುಸ್ತಕಗಳ ಪ್ರತಿಗಳನ್ನು ಪ್ರದರ್ಶಿಸಿದರು.

ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ,  ಸಿಎಂ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು, ರಾಜ್ಯಕ್ಕೆ ಅಪಖ್ಯಾತಿ ತಂದಿರುವ ಸಿಎಂ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ 12ನೇ ತರಗತಿಯ ಇಂಗ್ಲೀಷನ್ ಹಾಗೂ ಹಿಂದಿ ಪಠ್ಯ ಪುಸ್ತಕಗಳನ್ನು ಪ್ರದರ್ಶಿಸಿದ ಸಚಿವ ಅಶೋಕ್ ಚೌಧರಿ,  ಇದು ನಮ್ಮ ನಾಯಕ ಹೇಳಿದ ವಿಷಯವನ್ನೇ ಹೇಳುತ್ತದೆ. ನಮ್ಮ ನಾಯಕರ ಹೇಳಿಕೆ ನಿಂದನಾತ್ಮಕವಾಗಿದೆ ಎಂದು ವಿಪಕ್ಷ ಸದಸ್ಯರಿಗೆ ಮನವರಿಕೆ ಆದರೆ,  ಅವರು ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಈ ಪುಸ್ತಕಗಳನ್ನು ಬದಲಾಯಿಸಬೇಕು ಎಂದು ಹೇಳಿದರು. ಆದರೆ, ಬಿಜೆಪಿ ಸದಸ್ಯರು ಗದ್ದಲ ಮುಂದುವರಿಸಿದರು. 

ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲೇಶಿ ಸಿಂಗ್, ಶೀಲಾ ಮಂಡಲ್, ಇದೆಲ್ಲವೂ ವಿರೋಧ ಪಕ್ಷದ ದಿಕ್ಕು ತಪ್ಪಿಸುವ ತಂತ್ರವಾಗಿದೆ. ನಿತೀಶ್ ಕುಮಾರ್ ಅವರ ಐತಿಹಾಸಿಕ ನಡೆಗಳಾದ ಜಾತಿ ಸಮೀಕ್ಷೆ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಕೋಟಾಗಳ ಹೆಚ್ಚಳದಿಂದ ಗಮನ ಬೇರೆಡೆ ಸೆಳೆಯಲು ಮಾಡುತ್ತಿರುವ ರಾಜಕೀಯ ತಂತ್ರವಾಗಿದೆ ಎಂದು ಆರೋಪಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com