ಅವರು ದುಬಾರಿ ಸೂಟ್ ಧರಿಸುತ್ತಾರೆ, ನಾನು ಬಿಳಿ ಟಿ-ಶರ್ಟ್ ಧರಿಸುತ್ತೇನೆ: ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಲಕ್ಷಾಂತರ ರೂಪಾಯಿ ಮೌಲ್ಯದ ಸೂಟ್ ಗಳು, ಉಡುಪುಗಳನ್ನು ಧರಿಸುತ್ತಾರೆ. ಆದರೆ ನಾನು ಕೇವಲ ಈ ಬಿಳಿ ಟಿ-ಶರ್ಟ್ ನ್ನು ಧರಿಸುತ್ತೇನೆ ಎಂದು ಹೇಳಿದ್ದಾರೆ.

ಸತ್ನಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಪ್ರಧಾನಿ ಮೋದಿ ಅವರ ಭಾಷಣ ಕೇಳಿದೆ. ಅವರು ಪ್ರತಿ ಭಾಷಣದಲ್ಲೂ ನಾನು ಒಬಿಸಿ ಸಮುದಾಯಕ್ಕೆ ಸೇರಿದವನು ಎಂದು ಹೇಳುತ್ತಿದ್ದರು. ಇದನ್ನೇ ಪದೇ ಪದೇ ಹೇಳುವ ಮೂಲಕ ಅವರು ಪ್ರಧಾನಿಯೂ ಆದರು. ಆದರೆ ಅವರು ದಿನಕ್ಕೆ ಕನಿಷ್ಠ 2 ಬಾರಿಯಾದರೂ ಲಕ್ಷಾಂತರ ರೂಪಾಯಿ ಮೌಲ್ಯದ ಸೂಟ್ ಧರಿಸುತ್ತಾರೆ. ಪ್ರಧಾನಿ ಮೋದಿ ಒಂದೇ ಬಟ್ಟೆಯನ್ನು ಪುನರಾವರ್ತಿಸಿರುವುದನ್ನು ನೀವು ಗಮನಿಸಿದ್ದೀರಾ? ನಾನು ಇದೊಂದು ಬಿಳಿ ಶರ್ಟ್ ಧರಿಸುತ್ತೇನೆ. ನಾನು ಜಾತಿ ಗಣತಿ ಬಗ್ಗೆ ಮಾತನಾಡಲು ಆರಂಭಿಸಿದ ಬೆನ್ನಲ್ಲೇ ಮೋದಿ ಅವರ ಭಾಷಣದಲ್ಲಿ ಜಾತಿ ಮಾಯವಾಗಿದೆ. ಈಗ ಪ್ರಧಾನಿ ಮೋದಿ ದೇಶದಲ್ಲಿ ಜಾತಿಯತೆ ಎಂಬುದು ಇಲ್ಲ ಎಂದು ಹೇಳಲು ಪ್ರಾರಂಭಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ,  ಜಾತಿವಾರು ಜನಗಣತಿ ನಡೆಸುವುದು ಅದರ ಮೊದಲ ಹೆಜ್ಜೆಯಾಗಿರಲಿದೆ ಎಂದು ರಾಹುಲ್ ಗಾಂಧಿ ಇದೇವೇಳೆ ಘೋಷಿಸಿದ್ದಾರೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ರಾಷ್ಟ್ರವ್ಯಾಪಿ ಜಾತಿವಾರು ಗಣತಿ ಸಮೀಕ್ಷೆ ನಡೆಸುತ್ತೇವೆ.

"ಜಾತಿವಾರು ಜನಗಣತಿ ಆಗದಿರುವವರೆಗೆ ಹಿಂದುಳಿದ ವರ್ಗದವರಿಗೆ ಕೊಡುಗೆ ನೀಡಲು ಸಾಧ್ಯವಿಲ್ಲ. ಕೆಲವು ದಿನಗಳ ಹಿಂದೆ ಛತ್ತೀಸ್‌ಗಢದಲ್ಲಿ ಪ್ರಚಾರದ ವೇಳೆ ನಾನು ಕೆಲವು ರೈತರನ್ನು ಭೇಟಿಯಾದೆ. ನಾನು ಅವರ ಜಮೀನಿನ ದರವನ್ನು ಕೇಳಿದೆ. ನನ್ನ ಜಮೀನಿನ ದರ ನನಗೆ ಗೊತ್ತಿಲ್ಲ ಎಂದು ರೈತ ಹೇಳಿದಾಗ ನನಗೆ ಆಶ್ಚರ್ಯವಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com