ಕಾಂಗ್ರೆಸ್ ಬಂದಿತ್ತು, ವಿನಾಶ ತಂದಿತ್ತು: ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದ ಪಕ್ಷವೊಂದು ಜೊತೆಗೆ ವಿನಾಶವನ್ನೂ ತಂದಿತ್ತು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಪಕ್ಷವೊಂದು ಅಧಿಕಾರದ ಜೊತೆಗೆ ವಿನಾಶವನ್ನೂ ತಂದಿತು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ವಾಗ್ದಾಳಿ ನಡೆಸಿದರು.

ಸತ್ನಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, "ಕಾಂಗ್ರೆಸ್ ಬಂದಿತ್ತು, ವಿನಾಶ ತಂದಿತ್ತು ಎಂದು ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬಳಿ ಯಾವುದೇ ಮಾರ್ಗಸೂಚಿ ಇಲ್ಲ. ಇಲ್ಲಿನ ಯುವಕರಿಗೆ ಕಾಂಗ್ರೆಸ್ ನಿಂದ ಯಾವುದೇ ಭವಿಷ್ಯವಿಲ್ಲ. ಹೀಗಾಗಿ ಅವರು ಮೋದಿ ಗ್ಯಾರಂಟಿಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮ್ಮ ಪಕ್ಷ ನೀಡುವ ಪ್ರತೀ ಗ್ಯಾರಂಟಿ ಪೂರ್ಣಗೊಳಿಸುತ್ತೇವೆಂದು ಭರವಸೆ ನೀಡಿದರು.

ಇದೇ ವೇಳೆ ರಾಜ್ಯದ ಜನತೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡ ಅವರು, ನಿಮ್ಮ ಒಂದು ಮತ ದೇಶದ ಶತ್ರುಗಳ ಧೈರ್ಯವನ್ನು ಕುಗ್ಗಿಸುವ ಅದ್ಭುತವನ್ನು ಮಾಡುತ್ತದೆ, ನಿಮ್ಮ ಒಂದು ಮತವು ದೆಹಲಿಯಲ್ಲಿ ಮೋದಿಯನ್ನು ಬಲಪಡಿಸುತ್ತದೆ, ನಿಮ್ಮ ಒಂದು ಮತವು ಭ್ರಷ್ಟ ಕಾಂಗ್ರೆಸ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಧಿಕಾರಕ್ಕೆ ಬಂದರೆ ಉಚಿತ ಪಡಿತರ ಹಾಗೂ ಉಚಿತ ಆರೋಗ್ಯ ಸೇವೆ ನೀಡುವುದಾಗಿ ಕಾಂಗ್ರೆಸ್ ಹೇಳುತ್ತದೆ. ಆದರೆ, ಮಧ್ಯಪ್ರದೇಶವನ್ನು ಕತ್ತಲೆಗೆ ದೂಡಿತ್ತು. ಹೀಗಾಗಿ ಬಿಜೆಪಿ ರಾಜ್ಯವನ್ನು ಅದರಿಂದ ಹೊರತರಲು ಪ್ರಯತ್ನಿಸಿತು. ಇದು ಸಬ್ಕಾ ವಿಕಾಸದ ಸಮಯವಾಗಿದೆ. ದಲಿತ, ಹಿಂದುಳಿದ, ಬುಡಕಟ್ಟು, ಬಡವರು ಸೇರಿದಂತೆ ಎಲ್ಲರೂ ತಮ್ಮ ಹಕ್ಕುಗಳನ್ನು ಪಡೆಯುತ್ತಾರೆಂದು ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ಜನರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಾಣ ಮಾಡಿದೆ. ಕೊಟ್ಟ ಮಾತಿನಂತೆ ನಾವು ರಾಮ ಮಂದಿರವನ್ನು ನಿರ್ಮಾಣ ಮಾಡಿದ್ದೇವೆ. ಅದೇ ರೀತಿಯ ಮನಸ್ಥಿತಿಯೊಂದಿಗೆ 4 ಕೋಟಿ ಮನೆಗಳನ್ನೂ ನಿರ್ಮಾಣ ಮಾಡುತ್ತೇವೆ. ಯಾರಿಗೆಲ್ಲಾ ಮನೆಯಿಲ್ಲವೋ ಎಲ್ಲರಿಗೂ ಮನೆ ದೊರೆಯುವಂತೆ ಮಾಡಲಾಗುತ್ತದೆ. ಇದು ಮೋದಿ ನೀಡುತ್ತಿರುವ ಭರವಸೆ ಎಂದರು.

ಬಳಿಕ ಕಾಂಗ್ರೆಸ್ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿದ್ದ ಹಣ ಎಲ್ಲಿಗೆ ಹೋಯಿತು? 2ಜಿ ಹಗರಣ, ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಹಗರಣಕ್ಕೆ ಹೋಯಿತು. ಆದರೆ, ನಮ್ಮ ಸರ್ಕಾರ ಆ ಎಲ್ಲಾ ಹಗರಣಗಳಿಗೆ ಕಡಿವಾಣ ಹಾಕಿತು. 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಬಡವರ ಖಾತೆಗಳಿಗೆ ರೂ.10 ಲಕ್ಷ ಕೋಟಿ ತಲುಪಿಸಿದೆ. ಕೊರೋನಾ ಸಮಯದಲ್ಲಿ ಸರ್ಕಾರ ಉಚಿತ ಪಡಿತರ ನೀಡುವ ಯೋಜನೆ ಆರಂಭಿಸಿತು. ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಯೋಜನೆ ಮುಂದುವರೆಸುವಂತೆ ಜನರು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ 5 ವರ್ಷಗಳ ಕಾಲ ಯೋಜನೆ ಮುಂದುವರೆಸಲು ನಿರ್ಧರಿಸಲಾಗಿದೆ. ಇದು ಸತ್ನಾ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಪಡಿತರ ಕುರಿತ ಚಿಂತೆಗಳನ್ನು ದೂರಾಗಿಸಲಿಗೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com