ತೆಲಂಗಾಣ: ಕಗಜ್‌ನಗರದಲ್ಲಿ ಬಿಆರ್‌ಎಸ್‌, ಬಿಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆ

ತೆಲಂಗಾಣ ವಿಧಾನಸಭೆ ಕೆಲ ದಿನಗಳು ಬಾಕಿಯಿರುವಂತೆಯೇ ಪ್ರಚಾರದ ಕಣ ರಂಗೇರಿದ್ದು, ಅಲಲ್ಲಿ ಘರ್ಷಣೆಯಂತಹ ಘಟನೆಗಳು ನಡೆಯುತ್ತಿವೆ. ಭಾನುವಾರ ರಾತ್ರಿ ಕೊಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕಗಜ್‌ನಗರದಲ್ಲಿ  ಬಿಆರ್ ಎಸ್ ಮತ್ತು ಬಿಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. 
ಬಿಎಸ್ ಪಿ ,ಬಿಆರ್ ಎಸ್ ಕಾರ್ಯಕರ್ತರ ಘರ್ಷಣೆ
ಬಿಎಸ್ ಪಿ ,ಬಿಆರ್ ಎಸ್ ಕಾರ್ಯಕರ್ತರ ಘರ್ಷಣೆ

ಹೈದರಾಬಾದ್: ತೆಲಂಗಾಣ ವಿಧಾನಸಭೆ ಕೆಲ ದಿನಗಳು ಬಾಕಿಯಿರುವಂತೆಯೇ ಪ್ರಚಾರದ ಕಣ ರಂಗೇರಿದ್ದು, ಅಲಲ್ಲಿ ಘರ್ಷಣೆಯಂತಹ ಘಟನೆಗಳು ನಡೆಯುತ್ತಿವೆ. ಭಾನುವಾರ ರಾತ್ರಿ ಕೊಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕಗಜ್‌ನಗರದಲ್ಲಿ  ಬಿಆರ್ ಎಸ್ ಮತ್ತು ಬಿಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. 

ಚುನಾವಣಾ ಸಭೆಯೊಂದರಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್.ಎಸ್.ಪ್ರವೀಣ್ ಕುಮಾರ್ ಮಾತನಾಡುತ್ತಿದ್ದ ಆಡಳಿತ ಪಕ್ಷದ ಬೆಂಬಲಿಗರು ಅಡ್ಡಿಪಡಿಸಿದ್ದರಿಂದ ಗಲಾಟೆ ಆರಂಭವಾಗಿದೆ. ಅಲ್ಲಿಗೆ ಆಗಮಿಸಿದ ಬಿಆರ್ ಎಸ್  ಪ್ರಚಾರದ ವಾಹನವೊಂದರಲ್ಲಿ ಜೋರಾದ ಶಬ್ದದೊಂದಿಗೆ ಹಾಡುಗಳನ್ನು ಹಾಕಲಾಗಿದೆ. ಇದರಿಂದಾಗಿ ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. 

ಮನವಿಯ ಹೊರತಾಗಿಯೂ ಬಿಆರ್‌ಎಸ್ ಕಾರ್ಯಕರ್ತರು ಹಾಡಿನ ಧ್ವನಿಯನ್ನು ಕಡಿಮೆ ಮಾಡಲು ನಿರಾಕರಿಸಿದರು ಎಂದು ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.  ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಕಗಜ್ ನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಘಟನೆಗೆ ಬಿಆರ್ ಎಸ್ ಶಾಸಕ ಕೋನೇರು ಕೋನಪ್ಪ ಕಾರಣ ಎಂದು ಆರೋಪಿಸಿದರು.

ಮಾಜಿ ಐಪಿಸಿ ಅಧಿಕಾರಿ ಪ್ರವೀಣ್ ಕುಮಾರ್ ನವೆಂಬರ್ 30 ರಂದು ನಡೆಯಲಿರುವ ಚುನಾವಣೆಗಾಗಿ ಸಿರ್ಪುರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿ ಎಲ್ಲಾ 119 ವಿಧಾನಸಭಾ ಸ್ಥಾನಗಳಿಗೂ ಸ್ಪರ್ಧಿಸುತ್ತಿದೆ. ನವೆಂಬರ್ 30 ರಂದು ಚುನಾವಣೆ ನಿಗದಿಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com