ಆದಿವಾಸಿಗಳ ಉನ್ನತಿಗಾಗಿ 24 ಸಾವಿರ ಕೋಟಿ ರೂ.ಗಳ ಯೋಜನೆಗೆ ನ.15ರಂದು ಪ್ರಧಾನಿ ಮೋದಿ ಚಾಲನೆ

ಆದಿವಾಸಿಗಳ ಉನ್ನತಿಗಾಗಿ 24,000 ಕೋಟಿ ರೂ.ಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಆದಿವಾಸಿಗಳ ಉನ್ನತಿಗಾಗಿ 24,000 ಕೋಟಿ ರೂ.ಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಚಾಲನೆ ನೀಡಲಿದ್ದಾರೆ.

 ಸ್ವಾತಂತ್ರ್ಯಾ ನಂತರ ದೇಶದಲ್ಲಿ ಈ ರೀತಿಯ ಮೊದಲ ಯೋಜನೆ ಇದಾಗಿದೆ. ಇದನ್ನು PM PVTG (ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು) ಅಭಿವೃದ್ಧಿ ಮಿಷನ್ ಎಂದು ಹೆಸರಿಸಲಾಗಿದೆ. 2023-24ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಈ ಉದ್ದೇಶವನ್ನು ಘೋಷಿಸಲಾಗಿದೆ. ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ (PVTG) ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ. ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ 75 ಬುಡಕಟ್ಟುಗಳಿವೆ. ಅವರು 200 ಜಿಲ್ಲೆಗಳಲ್ಲಿ 22,544 ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. 28 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ.

ಈ ಬುಡಕಟ್ಟುಗಳು ಹೆಚ್ಚಾಗಿ ದಟ್ಟವಾದ ಕಾಡುಗಳಲ್ಲಿ ವಾಸಿಸುತ್ತವೆ. ಅವರನ್ನು ತಲುಪುವುದು ಸುಲಭವಲ್ಲ. ಹೀಗಾಗಿ ಅವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ, ಮಿಷನ್ ಅಡಿಯಲ್ಲಿ ರಸ್ತೆ ಮತ್ತು ಟೆಲಿಕಾಂ ಸಂಪರ್ಕ, ವಿದ್ಯುತ್, ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಸೌಲಭ್ಯಗಳನ್ನು ಈ ಬುಡಕಟ್ಟು ಪ್ರದೇಶಗಳಲ್ಲಿ ಒದಗಿಸಲಾಗುವುದು. ಅಲ್ಲದೆ, ಅವರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸಲಾಗುವುದು. ಒಂಬತ್ತು ಸಚಿವಾಲಯಗಳ 11 ಯೋಜನೆಗಳ ಮೂಲಕ ಈ ಮಿಷನ್ ಅನ್ನು ಕಾರ್ಯಗತಗೊಳಿಸಲಾಗುತ್ತದೆ. ಯೋಜನೆಯ ಕೆಲವು ಷರತ್ತುಗಳನ್ನು ಸಹ ಸಡಿಲಗೊಳಿಸಲಾಗುವುದು.

ಬಿರ್ಸಾ ಮುಂಡಾ ಗ್ರಾಮದಲ್ಲಿ ಮೋದಿ ಚಾಲನೆ
ನವೆಂಬರ್ 15ರಂದು ಹುತಾತ್ಮ ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಉಲಿಹಾತುದಲ್ಲಿ ಮೋದಿ ಇರಲಿದ್ದಾರೆ. ಮೂಲಗಳ ಪ್ರಕಾರ ಪ್ರಧಾನಿಯವರು ನವೆಂಬರ್ 14 ರ ಸಂಜೆ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಇದಾದ ಬಳಿಕ ರಾಂಚಿ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ರೋಡ್ ಶೋ ನಡೆಸಲಿದ್ದಾರೆ. 

ನವೆಂಬರ್ 15 ರಂದು ಬೆಳಿಗ್ಗೆ ಅವರು ಮೊದಲು ರಾಜಧಾನಿಯ ಜೈಲ್ ಚೌಕ್‌ನಲ್ಲಿರುವ 'ಭಗವಾನ್ ಬಿರ್ಸಾ ಮುಂಡಾ ಮೆಮೋರಿಯಲ್ ಗಾರ್ಡನ್ ಕಮ್ ಫ್ರೀಡಂ ಫೈಟರ್ಸ್ ಮ್ಯೂಸಿಯಂ'ಗೆ ಹೋಗುತ್ತಾರೆ. ಇದಾದ ಬಳಿಕ ರಾಂಚಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಖುಂಟಿಗೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಅವರು 'ಉಲಿಹಾತು' ನಲ್ಲಿರುವ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ ಮತ್ತು PVTG ಮಿಷನ್ ಗೆ ಚಾಲನೆ ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com