ಬಿಜೆಪಿ ಸರ್ಕಾರ ಎಲ್ಲವನ್ನು ಕೇಸರಿಮಯ ಮಾಡುತ್ತಿದೆ: ಟೀಂ ಇಂಡಿಯಾದ ಕೇಸರಿ ಜೆರ್ಸಿಗೆ ಮಮತಾ ಆಕ್ಷೇಪ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರವು ಹಲವು ಸಂಸ್ಥೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on

ಕೊಲ್ಕತ್ತಾ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರವು ಹಲವು ಸಂಸ್ಥೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ ಅಭ್ಯಾಸದ ವೇಳೆ ತೊಡುವ ಕೇಸರಿ ಜೆರ್ಸಿಯನ್ನು ಅವರು ವಿರೋಧಿಸಿದ್ದಾರೆ.

ಪೊಸ್ತಾ ಬಝಾರ್‌ನಲ್ಲಿ ಜಗಧಾತ್ರಿ ಪೂಜಾದ ಉದ್ಘಾಟನೆ ವೇಳೆ ಮಾತನಾಡಿದ ಅವರು, ಟೀಂ ಇಂಡಿಯಾದ ಅಭ್ಯಾಸ ಜೆರ್ಸಿಗಳಲ್ಲಿ ಮಾತ್ರವಲ್ಲದೆ, ಮೆಟ್ರೋ ಸ್ಟೇಷನ್‌ಗಳಿಗೂ ಕೇಂದ್ರ ಸರ್ಕಾರ ಕೇಸರಿ ಬಣ್ಣ ಹೊಡೆಸುತ್ತಿದೆ ಎಂದಿದ್ದಾರೆ.

ಕ್ರಿಕೆಟ್ ತಂಡದ ಪ್ರ್ಯಾಕ್ಟೀಸ್‌ ಜೆರ್ಸಿ ಮಾತ್ರವಲ್ಲದೆ ಮೆಟ್ರೋ ನಿಲ್ದಾಣಗಳ ಪೇಂಟಿಂಗ್‌ನಲ್ಲಿಯೂ ಬಿಜೆಪಿ ತನ್ನ ಬಣ್ಣವಾದ ಕೇಸರಿಯನ್ನು ಬಳಿಯುತ್ತಿದೆ ಎಂದು ಅವರು ಅರೋಪ ಮಾಡಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, 'ಅವರು ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ನನಗೆ ಹೆಮ್ಮೆ ಇದೆ ಮತ್ತು ಅವರು ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುತ್ತಾರೆ ಎಂದು ನಾನು ನಂಬುತ್ತೇನೆ.

ಆದರೆ, ಅವರಲ್ಲಿಯೂ ಬಿಜೆಪಿ ಕೇಸರಿ ಬಣ್ಣವನ್ನು ತಂದಿದೆ. ಈಗ ನಮ್ಮ ಆಟಗಾರರು ಕೇಸರಿ ಬಣ್ಣದ ಜೆಸರ್ಲಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ದೇಶದ ಮೆಟ್ರೋ ಸ್ಟೇಷನ್‌ಗಳನ್ನೂ ಕೇಸರಿಮಯವನ್ನಾಗಿ ಮಾಡಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಯಾರನ್ನೂ ಸ್ಪಷ್ಟವಾಗಿ ಹೆಸರಿಸದೆ, ಬ್ಯಾನರ್ಜಿ ಅವರು ಪಕ್ಷಪಾತದ ರಾಜಕೀಯವೆಂದು ಪರಿಗಣಿಸಿರುವುದನ್ನು ಖಂಡಿಸಿದರು. ಅವರು ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರು ಎಲ್ಲವನ್ನೂ ಕೇಸರಿ ಮಾಡಲು ಪ್ರಯತ್ನಿಸುತ್ತಿದ್ದಾರೆ, ನಾನು ಒಮ್ಮೆ ಮಾಯಾವತಿ ಅವರ ಪ್ರತಿಮೆಯನ್ನು ಮಾಡಿರುವುದನ್ನು ನಾನು ನೋಡಿದೆ.

ನಂತರ ನಾನು ಅಂತಹ ಯಾವುದನ್ನೂ ಕೇಳಲಿಲ್ಲ. ಇಂಥ ನಾಟಕಗಳು ಯಾವ ಪ್ರಯೋಜನ ಕೂಡ ನೀಡೋದಿಲ್ಲ. ಯಾವುದೇ ಲಾಭ ತರೋದಿಲ್ಲ. ಅಧಿಕಾರ ಅನ್ನೋದು ಬರುತ್ತದೆ ಹೋಗುತ್ತದೆ ಎನ್ನುವುದು ಗೊತ್ತಿರಬೇಕು' ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶವು "ರಾಷ್ಟ್ರದ ಜನತಾ (ಜನರಿಗೆ) ಸೇರಿದೆಯೇ ಹೊರತು ಕೇವಲ ಒಂದು ಪಕ್ಷದ ಜನತೆಗೆ ಆ ಪಕ್ಷ ಸೇರಿಲ್ಲ' ಎಂದು ಹೇಳಿದರು. ಇನ್ನು ಬಿಜೆಪಿ ಇದನ್ನು ತೀವ್ರವಾಗಿ ಟೀಕಿಸಿದ್ದು, ಸೇಡು ತೀರಿಸಿಕೊಳ್ಳುವ ವಿಧಾನದ ರೂಪ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com