ನವಜಾತ ಹೆಣ್ಣು ಜಿರಾಫೆಗೆ ಹೆಸರು ಸೂಚಿಸುವಂತೆ ನೆಟಿಜನ್‌ಗಳಿಗೆ ಅಸ್ಸಾಂ ಸಿಎಂ ಮನವಿ

ಅಸ್ಸಾಂನ ಝೂ-ಕಮ್-ಬೊಟಾನಿಕಲ್ ಗಾರ್ಡನ್‌ನಲ್ಲಿ ಜನಿಸಿದ ಹೆಣ್ಣು ಜಿರಾಫೆಗೆ ಹೆಸರು ಸೂಚಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ನೆಟಿಜನ್‌ಗಳಿಗೆ ಮನವಿ ಮಾಡಿದ್ದಾರೆ.
ಜಿರಾಫೆ ಮರಿ
ಜಿರಾಫೆ ಮರಿ

ಗುವಾಹಟಿ: ಅಸ್ಸಾಂನ ಝೂ-ಕಮ್-ಬೊಟಾನಿಕಲ್ ಗಾರ್ಡನ್‌ನಲ್ಲಿ ಜನಿಸಿದ ಹೆಣ್ಣು ಜಿರಾಫೆಗೆ ಹೆಸರು ಸೂಚಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ನೆಟಿಜನ್‌ಗಳಿಗೆ ಮನವಿ ಮಾಡಿದ್ದಾರೆ.

“ಅಸ್ಸಾಂ ರಾಜ್ಯದ ಮೃಗಾಲಯದಲ್ಲಿ ಮೂರು ದಿನಗಳ ಹಿಂದೆ ಜಿರಾಫೆಯೊಂದು ಮುದ್ದಾದ ಹೆಣ್ಣು ಜಿರಾಫೆಗೆ ಜನ್ಮ ನೀಡಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ನವಜಾತ ಜಿರಾಫೆಗೆ ಹೆಸರಿಡಲು ಏನಾದರೂ ಸಲಹೆಗಳಿವೆಯೇ? ” ಎಂದು ಅಸ್ಸಾಂ ಸಿಎಂ ಜಿರಾಫೆಯ ಎರಡು ಫೋಟೋಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಒಬ್ಬರು ಅದಕ್ಕೆ ಮಾಲೋತಿ ಎಂದು ಹೆಸರಿಡಬೇಕು ಎಂದರೆ, ಮತ್ತೊಬ್ಬರು ಅಪೂರ್ವ ಎಂದು ಹೆಸರಿಡಬೇಕು ಎಂದು ಹೇಳಿದ್ದಾರೆ.

"ಅದು ಗಂಡಾಗಿದ್ದರೆ ಬಾಪುಕೋನ್, ಅದು ಹೆಣ್ಣಾಗಿದ್ದರೆ ಮಾಲೋತಿ ಎಂದು ಹೆಸರಿಡಿ ಎಂದು ನನ್ನ ಸಲಹೆ" ಎಂದು ವ್ಯಕ್ತಿಯೊಬ್ಬರು ಶರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com