ವಿಶಾಖಪಟ್ಟಣ: ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋದಿಂದ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಶಾಲಾ ಮಕ್ಕಳು, ಭೀಕರ ವಿಡಿಯೊ

ವಿಶಾಖಪಟ್ಟಣಂ ನಗರದ ಹೃದಯ ಭಾಗದಲ್ಲಿರುವ ಸಂಗಮ್-ಸರತ್ ವೃತ್ತದಲ್ಲಿ ಇಂದು ಬುಧವಾರ ಬೆಳಗ್ಗೆ ಶಾಲಾ ಆಟೋಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಎಂಟು ಮಕ್ಕಳು ವಾಹನದಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಟ್ರಕ್ ಆಟೋ ಡಿಕ್ಕಿ, ಆಟೋದಿಂದ ಕೆಳಗೆ ಬಿದ್ದ ಶಾಲಾ ಮಕ್ಕಳು
ಟ್ರಕ್ ಆಟೋ ಡಿಕ್ಕಿ, ಆಟೋದಿಂದ ಕೆಳಗೆ ಬಿದ್ದ ಶಾಲಾ ಮಕ್ಕಳು

ವಿಜಯವಾಡ: ವಿಶಾಖಪಟ್ಟಣಂ ನಗರದ ಹೃದಯ ಭಾಗದಲ್ಲಿರುವ ಸಂಗಮ್-ಸರತ್ ವೃತ್ತದಲ್ಲಿ ಇಂದು ಬುಧವಾರ ಬೆಳಗ್ಗೆ ಶಾಲಾ ಆಟೋಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಎಂಟು ಮಕ್ಕಳು ವಾಹನದಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮಕ್ಕಳು ರಾಮ್ ನಗರದಲ್ಲಿರುವ ತಮ್ಮ ಶಾಲೆಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಆಟೋ ಚಾಲಕನೂ ಗಾಯಗೊಂಡಿದ್ದಾನೆ. ರೈಲು ನಿಲ್ದಾಣದಿಂದ ಸಿರಿಪುರಂ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಟ್ರಕ್ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಡೈಮಂಡ್ ಪಾರ್ಕ್ ರಸ್ತೆಯಿಂದ ಅಂಬೇಡ್ಕರ್ ಪ್ರತಿಮೆ ಜಂಕ್ಷನ್ ಕಡೆಗೆ ಹೋಗುತ್ತಿತ್ತು.

ರಸ್ತೆಯಲ್ಲಿ ಹೆಚ್ಚು ವಾಹನ ದಟ್ಟಣೆ ಇಲ್ಲದ ಕಾರಣ ಎರಡೂ ವಾಹನಗಳು ಅತಿವೇಗದಲ್ಲಿದ್ದವು. ಸಮೀಪದ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.

ಅಪಘಾತದ ರಭಸಕ್ಕೆ ಆಟೋದಲ್ಲಿದ್ದ ಮಕ್ಕಳೆಲ್ಲಾ ಆಟೊದಿಂದ ಹೊರಬಿದ್ದರು. ಸ್ಥಳಕ್ಕಾಗಮಿಸಿದ ಸ್ಥಳೀಯರು ಮಕ್ಕಳನ್ನು ರಕ್ಷಿಸಿದ್ದಾರೆ. ಪಲ್ಟಿಯಾದ ಆಟೋದಡಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ಆಟೋಗೆ ಡಿಕ್ಕಿ ಹೊಡೆದ ನಂತರ 100 ಮೀಟರ್ ದೂರ ಸಾಗಿ ಲಾರಿ ನಿಂತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಟ್ರಕ್ ತಪ್ಪಿಸಿಕೊಳ್ಳಲು ಸಹಾಯ ಮಾಡುವಾಗ ಚಾಲಕ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com