ಜೆಯು ವಿದ್ಯಾರ್ಥಿ ರ್ಯಾಗಿಂಗ್ ಸಾವು: ಆರೋಪಿಗಳ ವಿರುದ್ಧ 'ಶಿಸ್ತು ಕ್ರಮ' ವಿಳಂಬಕ್ಕೆ ಶಿಕ್ಷಕರ ಸಂಘ ಅಸಮಾಧಾನ!

ಜಾದವ್‌ಪುರ ವಿಶ್ವವಿದ್ಯಾನಿಲಯದ ಸ್ನಾತಕಪೂರ್ವ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್‌ ವೇಳೆ ಹಾಸ್ಟೆಲ್ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದು ಮೂರು ತಿಂಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ವಿಶ್ವವಿದ್ಯಾಲಯ 'ಶಿಸ್ತು ಕ್ರಮ' ತೆಗೆದುಕೊಂಡಿಲ್ಲ ಎಂದು ಶಿಕ್ಷಕರ ಸಂಘ ಕಳವಳ ವ್ಯಕ್ತಪಡಿಸಿದೆ.
ಜೋಧಪುರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು
ಜೋಧಪುರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು
Updated on

ಕೋಲ್ಕತ್ತಾ: ಜಾದವ್‌ಪುರ ವಿಶ್ವವಿದ್ಯಾನಿಲಯದ ಸ್ನಾತಕಪೂರ್ವ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್‌ ವೇಳೆ ಹಾಸ್ಟೆಲ್ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದು ಮೂರು ತಿಂಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ವಿಶ್ವವಿದ್ಯಾಲಯ 'ಶಿಸ್ತು ಕ್ರಮ' ತೆಗೆದುಕೊಂಡಿಲ್ಲ ಎಂದು ಶಿಕ್ಷಕರ ಸಂಘ ಕಳವಳ ವ್ಯಕ್ತಪಡಿಸಿದೆ.

ಜಾದವ್‌ಪುರ ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘದ (JUTA) ಉಪಕುಲಪತಿ ಬುದ್ಧದೇಬ್ ಸೌ ಅವರಿಗೆ ಪತ್ರ ಬರೆದಿರುವ ಶಿಕ್ಷಕರ ಸಂಘ ಶಿಸ್ತು ಕ್ರಮಕೈಗೊಳ್ಳುವಲ್ಲಿ ವಿಳಂಬವನ್ನು ನೋಡುತ್ತಿದ್ದರೆ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುವ ರ್ಯಾಗಿಂಗ್ ಗೆ ಕಡಿವಾಣ ಹಾಕುವ ಆಡಳಿತ ಮಂಡಳಿಯ ಉದ್ದೇಶದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ತೀವ್ರ ರ್ಯಾಗಿಂಗ್ ಗೆ ಒಳಗಾಗಿದ್ದ ವಿದ್ಯಾರ್ಥಿ ಆಗಸ್ಟ್ 9ರಂದು ಜೆಯು ಮುಖ್ಯ ಹಾಸ್ಟೆಲ್‌ನ ಎರಡನೇ ಮಹಡಿಯ ಬಾಲ್ಕನಿಯಿಂದ ಜಿಗಿದಿದ್ದು ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ವಿಶ್ವವಿದ್ಯಾನಿಲಯದ ರ್ಯಾಗಿಂಗ್ ವಿರೋಧಿ ಸಮಿತಿ ಮತ್ತು ಆ್ಯಂಟಿ ರ್ಯಾಗಿಂಗ್ ಸ್ಕ್ವಾಡ್‌ನ ಸರಣಿ ಸಭೆಗಳ ಹೊರತಾಗಿಯೂ ಪ್ರಥಮ ವರ್ಷದ ವಿದ್ಯಾರ್ಥಿಯ ಸಾವಿನ ಅಪರಾಧಿಗಳ ವಿರುದ್ಧ ಶಿಸ್ತು ಕ್ರಮವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ ಎಂಬುದನ್ನು ನಾವು ತೀವ್ರ ಕಳವಳಕ್ಕೆ ಕಾರಣವಾಗಿದೆ ಎಂದು JUTA ಪತ್ರದಲ್ಲಿ ಬರೆದಿದೆ.

ಶಿಕ್ಷೆಯನ್ನು ವಿಧಿಸುವಲ್ಲಿ ಅತಿಯಾದ ವಿಳಂಬವು ವಿಶ್ವವಿದ್ಯಾನಿಲಯದಲ್ಲಿ ರ್ಯಾಗಿಂಗ್ ಅನ್ನು ನಿಗ್ರಹಿಸಲು ಆಡಳಿತದ ಪಾತ್ರ ಮತ್ತು ಹಿತಾಸಕ್ತಿಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ, ಸಾಂಸ್ಥಿಕ ನಿಯಮಗಳು ಮತ್ತು ನಿಬಂಧನೆಗಳನ್ನು ಬಳಸಿಕೊಂಡು ಗುರುತಿಸಲಾದ ತಪ್ಪಿತಸ್ಥರನ್ನು ತಕ್ಷಣವೇ ಶಿಕ್ಷಿಸಬೇಕೆಂದು JUTA ಒತ್ತಾಯಿಸುತ್ತಿದೆ. ಅದು ಗಂಭೀರ ಕಾನೂನು ಕ್ರಮಗಳಿಗೆ ಮುಂದಾಗುತ್ತಿಗದ್ದು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಆಡಳಿತ ಮಂಡಳಿ ವಿರುದ್ಧದ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಜೆಯು ಆ್ಯಂಟಿ ರ್ಯಾಗಿಂಗ್ ಸ್ಕ್ವಾಡ್ ಎರಡು ತಿಂಗಳ ಹಿಂದೆ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಯುಜಿ ವಿದ್ಯಾರ್ಥಿ ಸಾವನ್ನಪ್ಪಿದ ವಾರ್ಸಿಟಿ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ 35 ಹಿರಿಯ ವಿದ್ಯಾರ್ಥಿಗಳನ್ನು ಹೊರಹಾಕುವಂತೆ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com