ದನದ ಮಾಂಸ ತಿನ್ನುವ ಅಭ್ಯಾಸವನ್ನು ವಿರೋಧಿಸಿ ವಿದ್ಯಾರ್ಥಿನಿಗೆ ಥಳಿಸಿ, ನಿಂದಿಸಿದ ಶಿಕ್ಷಕಿ; ದೂರು ದಾಖಲು

ಶಿಕ್ಷಕಿಯೊಬ್ಬರು ಗೋಮಾಂಸ ತಿನ್ನುವ ತಮ್ಮ ಅಭ್ಯಾಸ ಮತ್ತು ಅವರ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅಶೋಕಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯ ಪೋಷಕರು ಮಂಗಳವಾರ ಮುಖ್ಯ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕೊಯಮತ್ತೂರು: ಶಿಕ್ಷಕಿಯೊಬ್ಬರು ಗೋಮಾಂಸ ತಿನ್ನುವ ತಮ್ಮ ಅಭ್ಯಾಸ ಮತ್ತು ಅವರ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅಶೋಕಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯ ಪೋಷಕರು ಮಂಗಳವಾರ ಮುಖ್ಯ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ 

ಹಿಜಾಬ್ ಧರಿಸಿ ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕಿ ಇಷ್ಟಪಡುತ್ತಿರಲಿಲ್ಲ ಮತ್ತು ಕಳೆದ ಕೆಲವು ತಿಂಗಳಿಂದ ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಹಿಜಾಬ್ ಧರಿಸಿ ಶಾಲೆಗೆ ಬರುವ ಮಕ್ಕಳನ್ನು ಕಂಡರೆ ಆಗುವುದಿಲ್ಲ ಎಂದು ಪೋಷಕರು ಅರ್ಜಿಯಲ್ಲಿ ತಿಳಿಸಿದ್ದಾರೆ.

'ಎರಡು ತಿಂಗಳ ಹಿಂದೆ, ಶಿಕ್ಷಕಿ ವಿದ್ಯಾರ್ಥಿನಿಗೆ ಕುಟುಂಬದ ಉದ್ಯೋಗದ ಬಗ್ಗೆ ಕೇಳಿದ್ದಾರೆ. ಆಗ ನನ್ನ ಮಗಳು ನಾವು ಗೋಮಾಂಸ ಮತ್ತು ಮಾಂಸದ ಅಂಗಡಿ ನಡೆಸುತ್ತಿದ್ದೇವೆ ಎಂದು ಹೇಳಿದ್ದಾಳೆ. ಆಗ ಶಿಕ್ಷಕಿ ನನ್ನ ಮಗಳಿಗೆ ಥಳಿಸಿದ್ದಾರೆ ಮತ್ತು ನಮ್ಮ ಆಹಾರ ಪದ್ಧತಿಯಾದ ಗೋಮಾಂಸ ಸೇವನೆಯನ್ನು ಟೀಕಿಸಿದ್ದಾರೆ. ಈ ಸಮಸ್ಯೆಯನ್ನು ಶಾಲೆಯ ಮುಖ್ಯೋಪಾಧ್ಯಾಯರ ಬಳಿ ತಿಳಿಸಿದಾಗ, ಅವರು ಕೂಡ ಶಿಕ್ಷಕಿಯನ್ನೇ ಬೆಂಬಲಿಸಿದರು. ಮುಖ್ಯಶಿಕ್ಷಕಿ ತಮ್ಮ ದೂರಿನ ಬಗ್ಗೆ ಕ್ರಮ ಕೈಗೊಳ್ಳದ ಕಾರಣ, ನಾವು  ಸಿಇಒ ಅವರನ್ನು ಸಂಪರ್ಕಿಸಿದೆವು' ಎಂದು ಪೋಷಕರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಲು ಮುಖ್ಯಶಿಕ್ಷಕಿ ರಾಜೇಶ್ವರಿ ನಿರಾಕರಿಸಿದರು. ಪೋಷಕರಿಂದ ದೂರನ್ನು ಸ್ವೀಕರಿಸಿದ್ದು, ತನಿಖೆಗೆ ಆದೇಶಿಸುವುದಾಗಿ ಮುಖ್ಯ ಶಿಕ್ಷಣಾಧಿಕಾರಿ ಆರ್ ಬಾಲಮುರಳಿ ಟಿಎನ್‌ಐಇಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com