ದೆಹಲಿಯಲ್ಲಿ ಮಾಲಿನ್ಯ ಮತ್ತಷ್ಟು ಹೆಚ್ಚಳ: ಅತ್ಯಂತ ಕಳಪೆ ಹಂತಕ್ಕೆ ತಲುಪಿದ ಎಕ್ಯುಐ ಮಟ್ಟ

ಇಂದು ಬುಧವಾರ ಬೆಳಗ್ಗೆ ದೆಹಲಿಯಾದ್ಯಂತ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ಅತ್ಯಂತ ಕಳಪೆ ಎಂದು ದಾಖಲಾಗಿದೆ, ನಗರದ ವಾಯು ಗುಣಮಟ್ಟ ಸೂಚ್ಯಂಕ(AQI) ಇಂದು ಬೆಳಗ್ಗೆ 9:05ಕ್ಕೆ 394ಕ್ಕೆ ತಲುಪಿದ್ದು, ನಿನ್ನೆ ಮಂಗಳವಾರ 365ರಷ್ಟಿತ್ತು. ಕನಿಷ್ಠ ತಾಪಮಾನವು 10.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇಂದು ಬುಧವಾರ ಬೆಳಗ್ಗೆ ದೆಹಲಿಯಾದ್ಯಂತ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ಅತ್ಯಂತ ಕಳಪೆ ಎಂದು ದಾಖಲಾಗಿದೆ, 
ನಗರದ ವಾಯು ಗುಣಮಟ್ಟ ಸೂಚ್ಯಂಕ(AQI) ಇಂದು ಬೆಳಗ್ಗೆ 9:05ಕ್ಕೆ 394ಕ್ಕೆ ತಲುಪಿದ್ದು, ನಿನ್ನೆ ಮಂಗಳವಾರ 365ರಷ್ಟಿತ್ತು. ಕನಿಷ್ಠ ತಾಪಮಾನವು 10.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಒಂದು ಹಂತಕ್ಕಿಂತ ಕಡಿಮೆಯಾಗಿದೆ, ಆದರೆ ಸಾಪೇಕ್ಷ ಆರ್ದ್ರತೆಯು ಬೆಳಿಗ್ಗೆ 8:30 ಕ್ಕೆ 76 ಶೇಕಡಾ ದಾಖಲಾಗಿದೆ.

ಭಾನುವಾರದಂದು ಅಲ್ಪ ಸುಧಾರಣೆಯ ನಂತರ ದೆಹಲಿಯು ವಾಯು ಸೂಚ್ಯಂಕ ಮಟ್ಟದಲ್ಲಿ ತೀವ್ರ ಹೆಚ್ಚಳವನ್ನು ಕಂಡಿದೆ. ಸೋಮವಾರ ಸಂಜೆ 4 ಗಂಟೆಗೆ ನಗರದ ಎಕ್ಯೂಐ 348 ರಷ್ಟಿದ್ದು, ಭಾನುವಾರ 301 ರಷ್ಟಿತ್ತು. 

ಸೊನ್ನೆ ಮತ್ತು 50 ರ ನಡುವಿನ AQI ಉತ್ತಮ, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ, 401 ಮತ್ತು 450 ತೀವ್ರ ಮತ್ತು 450 ಕ್ಕಿಂತ ಹೆಚ್ಚು ತೀವ್ರ ಎಂದು ಪರಿಗಣಿಸಲಾಗುತ್ತದೆ.

ಅನುಕೂಲಕರವಾದ ಗಾಳಿಯ ವೇಗ ಮತ್ತು ದಿಕ್ಕಿನಿಂದಾಗಿ ಮಾಲಿನ್ಯದ ಮಟ್ಟದಲ್ಲಿ ಇಳಿಕೆಯಾದ ನಂತರ ದೆಹಲಿಯಲ್ಲಿ ನಿರ್ಮಾಣ ಕಾರ್ಯಗಳು ಮತ್ತು ಮಾಲಿನ್ಯಕಾರಕ ಟ್ರಕ್‌ಗಳ ಪ್ರವೇಶ ಸೇರಿದಂತೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಕೇಂದ್ರವು ಶನಿವಾರ ತೆಗೆದುಹಾಕಿದ ನಂತರ AQI ಮಟ್ಟದಲ್ಲಿ ಹೆಚ್ಚಳವಾಗಿದೆ.

ಈ ಕ್ರಮಗಳು ಕೇಂದ್ರದ ವಾಯು ಮಾಲಿನ್ಯ ನಿಯಂತ್ರಣ ಯೋಜನೆಯ ಅಂತಿಮ ಹಂತ -- ಹಂತ 4 ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಎಂದು ಕರೆಯಲ್ಪಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com