ರಜೌರಿ ಎನ್ಕೌಂಟರ್: ಪಾಕಿಸ್ತಾನದ ಕೆಲ ನಿವೃತ್ತ ಯೋಧರು ಉಗ್ರರಾಗಿ ಪರಿವರ್ತನೆಗೊಂಡಿದ್ದಾರೆ; ಸೇನಾಧಿಕಾರಿ ಮಾಹಿತಿ
ಶ್ರೀನಗರ: ಪಾಕಿಸ್ತಾನದ ಕೆಲ ನಿವೃತ್ತ ಯೋಧರು ಭಯೋತ್ಪಾದಕರಾಗಿ ಪರಿವರ್ತನೆಗೊಂಡಿದ್ದಾರೆಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಹೇಳಿದ್ದಾರೆ.
ರಜೌರಿ ಎನ್ಕೌಂಟರ್ ನಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಕೆಲ ನಿವೃತ್ತ ಯೋಧರು ಉಗ್ರರಾಗಿ ಪರಿವರ್ತನೆಗೊಂಡಿರುವುದು ಕಂಡು ಬಂದಿದೆ. ಸ್ಥಳೀಯ ನೇಮಕಾತಿಗಳು ನಡೆಯಲು ಅವಕಾಶ ಸಿಗದ ಕಾರಣ ಪಾಕಿಸ್ತಾನ ವಿದೇಶಿ ಉಗ್ರರನ್ನು ಬಳಸಿಕೊಳ್ಳಲು ಪ್ರಾರಂಭಿಸಿದೆ. ಇದೀಗ ವಿದೇಶಿ ಉಗ್ರರ ನಿರ್ಮೂಲನೆಗೆ ಪ್ರಯತ್ನಗಳ ನಡೆಸಲಾಗುತ್ತಿದೆ ಎಂದು ಹೇಳಿದರು.
ರಜೌರಿಯಲ್ಲಿ ನಡೆದ ಎನ್ಕೌಂಟರ್ ನಿಂದ ಉಗ್ರರಿಗೆ ಭಾರೀ ಹಿನ್ನೆಡೆಯುಂಟಾಗಿದೆ. ಈ ಪ್ರದೇಶದಲ್ಲಿ ಪಾಕಿಸ್ತಾನದ 20-25 ಉಗ್ರರು ಸಕ್ರಿಯರಾಗಿದ್ದಾರೆ. ಇದರಲ್ಲಿ ಪಾಕಿಸ್ತಾನದ ಕೆಲ ನಿವೃತ್ತ ಯೋಧರೂ ಕೂಡ ಇದ್ದಾರೆ. ಒಂದು ವರ್ಷದ ಅವಧಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಿದೆ. ನಮ್ಮ ವೀರ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೆ ವಿದೇಶಿ ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ