ತೆಲಂಗಾಣ ವಿಧಾನಸಭೆ ಚುನಾವಣೆ: ಬಿಆರ್‌ಎಸ್‌ ಹಾಲಿ ಶಾಸಕ ಕಾಂಗ್ರೆಸ್‌ ಸೇರ್ಪಡೆ

ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ ಒಂದು ವಾರ ಬಾಕಿ ಇರುವಂತೆಯೇ ಬಿಆರ್ ಎಸ್ ಹಾಲಿ ಶಾಸಕ ಕೈ ಕೊಟ್ಟಿದ್ದು, ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಸೇರಿದ ಬಿಆರ್ ಎಸ್ ಹಾಲಿ ಶಾಸಕ ಅಬ್ರಹಾಂ
ಕಾಂಗ್ರೆಸ್ ಸೇರಿದ ಬಿಆರ್ ಎಸ್ ಹಾಲಿ ಶಾಸಕ ಅಬ್ರಹಾಂ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ ಒಂದು ವಾರ ಬಾಕಿ ಇರುವಂತೆಯೇ ಬಿಆರ್ ಎಸ್ ಹಾಲಿ ಶಾಸಕ ಕೈ ಕೊಟ್ಟಿದ್ದು, ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ವಿ.ಎಂ. ಜೋಗುಲಾಂಬ-ಗದ್ವಾಲ್ ಜಿಲ್ಲೆಯ ಆಲಂಪುರ ಕ್ಷೇತ್ರದ ಶಾಸಕ ಅಬ್ರಹಾಂ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ ಪಕ್ಷಕ್ಕೆ ಸ್ವಾಗತಿಸಿದರು.

ಆಗಸ್ಟ್‌ನಲ್ಲಿ ಬಿಆರ್‌ಎಸ್ ಇದೇ ಕ್ಷೇತ್ರದಿಂದ ಅಬ್ರಹಾಂ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿತ್ತು. ಪ್ರಚಾರವನ್ನೂ ಆರಂಭಿಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ಅವರನ್ನು ಬದಲಾಯಿಸಿ, ವಿಜಯುಡು ಅವರನ್ನು ಬಿಆರ್ ಎಸ್ ಕಣಕ್ಕಿಳಿಸಿತು. ಎಂಎಲ್‌ಸಿ ಚಲ್ಲಾ ವೆಂಕಟರಾಮಿ ರೆಡ್ಡಿ ನೇತೃತ್ವದ ಪಕ್ಷದ ಮುಖಂಡರ ಬೇಡಿಕೆಯಿಂದಾಗಿ ಬಿಆರ್‌ಎಸ್ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ ಎನ್ನಲಾಗಿದೆ. 

2018 ರ ಚುನಾವಣೆಯಲ್ಲಿ ಬಿಆರ್‌ಎಸ್ ಟಿಕೆಟ್‌ನಲ್ಲಿ ಆಲಂಪುರದಿಂದ ಚುನಾಯಿತರಾಗಿದ್ದ ಅಬ್ರಹಾಂ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಂಪತ್ ಕುಮಾರ್ ಅವರನ್ನು 44,000 ಮತಗಳಿಂದ ಸೋಲಿಸಿದ್ದರು. 2014ರ ಚುನಾವಣೆಯಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಅಬ್ರಹಾಂ, ಸಂಪತ್‌ಕುಮಾರ್‌ ವಿರುದ್ಧ ಸೋತಿದ್ದರು. ನಂತರ ಅಬ್ರಹಾಂ  ಟಿಆರ್‌ಎಸ್‌ಗೆ (ಈಗ ಬಿಆರ್‌ಎಸ್) ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದರು.119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com