ತೆಲಂಗಾಣ: ಕೆಸಿಆರ್‌ಗೆ 4 ಸಾವಿರ ರೂ. ವೃದ್ಧಾಪ್ಯ ವೇತನ, ಜೈಲಿನಲ್ಲಿ 2BHK ಮನೆ ನೀಡಲಾಗುವುದು- ರೇವಂತ್ ರೆಡ್ಡಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ 4,000 ರೂ. ವೃದ್ಧಾಪ್ಯ ವೇತನ ನೀಡಲಾಗುವುದು ಮತ್ತು ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ಅವರಿಗೆ 2 BHK ಮನೆ ನಿರ್ಮಿಸಿಕೊಡುವುದಾಗಿ ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ ಗುರುವಾರ ಹೇಳಿದ್ದಾರೆ.
ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ
ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ
Updated on

ಹೈದರಾಬಾದ್: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ 4,000 ರೂ. ವೃದ್ಧಾಪ್ಯ ವೇತನ ನೀಡಲಾಗುವುದು ಮತ್ತು ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ಅವರಿಗೆ 2 BHK ಮನೆ ನಿರ್ಮಿಸಿಕೊಡುವುದಾಗಿ ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ ಗುರುವಾರ ಹೇಳಿದ್ದಾರೆ.

ಕಾಂಗ್ರೆಸ್ ಈಗಿರುವ ವೃದ್ಧಾಪ್ಯ ವೇತನವನ್ನು 2,016 ದಿಂದ 4,000 ರೂ.ಗೆ ಹೆಚ್ಚಿಸಲಿದೆ ಎಂದ ಅವರು, ಬಡವರಿಗೆ 2 BHK ಮನೆ ಒದಗಿಸುವ 'ವಿಫಲ' ಭರವಸೆಯ ಬಗ್ಗೆ ಬಿಆರ್‌ಎಸ್ ಸರ್ಕಾರವನ್ನು ಲೇವಡಿ ಮಾಡಿದರು ಮತ್ತು ಕೆಸಿಆರ್ ರಾಜಕೀಯವಾಗಿ ನಿವೃತ್ತರಾಗುವ ವಿಶ್ವಾಸ ವ್ಯಕ್ತಪಡಿಸಿದರು.

'ಕೆಸಿಆರ್ ಮುಂದಿನ ತಿಂಗಳು ನಿವೃತ್ತರಾಗುತ್ತಿದ್ದಾರೆ. ಕಾಂಗ್ರೆಸ್ 4,000 ವೃದ್ಧಾಪ್ಯ ವೇತನ ನೀಡಲಿದೆ ಎಂಬುದನ್ನೂ ಅವರು ಗಮನದಲ್ಲಿಟ್ಟುಕೊಳ್ಳಬೇಕು. ರಾಜ್ಯವನ್ನು ಲೂಟಿ ಮಾಡಿರುವ ಕೆಸಿಆರ್‌ಗೆ ಇಂದಿರಮ್ಮ ರಾಜ್ಯವು ಚೆರ್ಲಪಲ್ಲಿ ಜೈಲಿನಲ್ಲಿ 2 ಬಿಎಚ್‌ಕೆ ಮನೆ ನಿರ್ಮಿಸಿಕೊಡಲಿದೆ' ಎಂದು ಅವರು ದುಬ್ಬಾಕದಲ್ಲಿ ಹೇಳಿದರು.

ದುಬ್ಬಾಕ, ಹುಜೂರಾಬಾದ್, ಮಣಕೊಂಡೂರು ಮತ್ತು ಎಲ್‌ಬಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ರೇವಂತ್ ಅವರು, ನಿರುದ್ಯೋಗ ಮತ್ತು ಟಿಎಸ್‌ಪಿಎಸ್‌ಸಿ ಮೂಲಕ ನೇಮಕಾತಿ ಕುರಿತು ಬಿಆರ್‌ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರ ಅಸಮರ್ಥರನ್ನು ಟಿಎಸ್‌ಪಿಎಸ್‌ಸಿಗೆ ನೇಮಿಸಿದೆ: ರೇವಂತ್

ರಾಜ್ಯ ಸರ್ಕಾರ ಅಸಮರ್ಥ ವ್ಯಕ್ತಿಗಳನ್ನು ಟಿಎಸ್‌ಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸಿದೆ ಮತ್ತು ಇದರ ಪರಿಣಾಮವಾಗಿ ಪರೀಕ್ಷೆಗೆ ಮುನ್ನವೇ ಅಂಗಡಿಗಳಲ್ಲಿ ಪ್ರಶ್ನೆ ಪತ್ರಿಕೆಯ ಪ್ರತಿಗಳು ಕಾಣಿಸಿಕೊಂಡಿವೆ ಎಂದು ರೇವಂತ್ ಹೇಳಿದರು.

ಮಣಕೊಂಡೂರಿನಲ್ಲಿ ಮಾತನಾಡಿ, ಅವರು ಸ್ಥಳೀಯ ಶಾಸಕ, ತೆಲಂಗಾಣದ ಜನಪ್ರಿಯ ಜಾನಪದ ಮತ್ತು ಕ್ರಾಂತಿಕಾರಿ ಗಾಯಕ ರಸಮಯಿ ಬಾಲಕಿಶನ್ ಅವರು 'ತೆಲಂಗಾಣ ಪ್ರತಿರೋಧ ಗೀತೆ'ಯನ್ನು ಊಳಿಗಮಾನ್ಯ ಜಮೀನುದಾರನಿಗೆ (ಕೆಸಿಆರ್) ಅಡಮಾನವಿಟ್ಟಿದ್ದಾರೆ ಎಂದು ಆರೋಪಿಸಿದರು.

'ಬೆಕ್ಕು ತನ್ನ ಸ್ಥಳವನ್ನು ಬದಲಾಯಿಸುವಂತೆ, ಕೆಸಿಆರ್ ತನ್ನ ಕ್ಷೇತ್ರವನ್ನು ಗಜ್ವೆಲ್‌ನಿಂದ ಕಾಮರೆಡ್ಡಿಗೆ ಬದಲಾಯಿಸಿದರು. ಆದರೆ, ಕೆಸಿಆರ್ ನಕಲಿ `100 ನೋಟು ಇದ್ದಂತೆ ಜನರ ಜೇಬಿನಲ್ಲಿದ್ದರೂ ಮೌಲ್ಯವೇ ಇಲ್ಲ' ಎಂದು ಹೇಳಿದ್ದಾರೆ.

ಎಲ್‌ಬಿ ನಗರದಲ್ಲಿ ಮಾತನಾಡಿ, ಬಿಆರ್‌ಎಸ್ ಶಾಸಕ ಮತ್ತು ಮೂಸಿ ಪುನರುಜ್ಜೀವನ ನಿಗಮದ ಮಾಜಿ ಅಧ್ಯಕ್ಷ ಸುಧೀರ್ ರೆಡ್ಡಿ ಅವರನ್ನು ಮೂಸಿಗೆ ಎಸೆಯಲು ಮಧು ಯಾಸ್ಕಿ ಗೌಡ ಅವರಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕಾಂಗ್ರೆಸ್‌ಗೆ ದ್ರೋಹ ಬಗೆದ 12 ಶಾಸಕರು ಈ ಬಾರಿ ಮತ್ತೆ ಆಯ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ಬಿಜೆಪಿ ಶಾಸಕ ಈಟಾಳ ರಾಜೇಂದರ್ ಉಪಚುನಾವಣೆಯಲ್ಲಿ ಗೆದ್ದ ನಂತರ ಕೇಂದ್ರದಿಂದ ವಿಶೇಷ ಅನುದಾನವನ್ನು ಏಕೆ ನೀಡಿಲ್ಲ ಎಂದು ಹುಜೂರಾಬಾದ್‌ನಲ್ಲಿ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com