ಸಿಲ್ಕ್ಯಾರ ಸುರಂಗ ಕುಸಿತ: ಕಾರ್ಮಿಕರಿಗೆ ಮೊಬೈಲ್ ಫೋನ್, ಬೋರ್ಡ್ ಗೇಮ್ ಕಳುಹಿಸುತ್ತಿರುವ ಅಧಿಕಾರಿಗಳು!

ಸಿಲ್ಕ್ಯಾರ ಸುರಂಗದಲ್ಲಿ ಹದಿನಾಲ್ಕು ದಿನಗಳಿಂದ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ಪದೇ ಪದೇ ಅಡೆತಡೆಗಳು ಉಂಟಾಗುತ್ತಿರುವ ಕಾರಣ, 41 ಕಾರ್ಮಿಕರ  ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಮೊಬೈಲ್ ಫೋನ್ ಮತ್ತು ಬೋರ್ಡ್ ಗೇಮ್ ಗಳನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ

ಡೆಹ್ರಾಡೂನ್: ಸಿಲ್ಕ್ಯಾರ ಸುರಂಗದಲ್ಲಿ ಹದಿನಾಲ್ಕು ದಿನಗಳಿಂದ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ ಪದೇ ಪದೇ ಅಡೆತಡೆಗಳು ಉಂಟಾಗುತ್ತಿರುವ ಕಾರಣ, 41 ಕಾರ್ಮಿಕರ  ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಮೊಬೈಲ್ ಫೋನ್ ಮತ್ತು ಬೋರ್ಡ್ ಗೇಮ್ ಗಳನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಮಿಕರು ವಿಡಿಯೋ ಗೇಮ್‌ಗಳನ್ನು ಆಡಲು ಮೊಬೈಲ್ ಫೋನ್‌ಗಳನ್ನು ನೀಡಲಾಗಿದೆ. ಅವರಿಗೆ ಲೂಡೋ ಮತ್ತು ಹಾವು- ಏಣಿಗಳಂತಹ ಬೋರ್ಡ್ ಗೇಮ್ ಗಳನ್ನು ಸಹ ಒದಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ."ಈ ಆಟಗಳು ಅವರ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

ಕೊರೆಯುವ ಯಂತ್ರ ನಿಷ್ಪ್ರಯೋಜಕವಾಗಿದ್ದು, ಅಧಿಕಾರಿಗಳು ಈಗ ಎರಡು ಪರ್ಯಾಯಗಳತ್ತ ಗಮನ ಹರಿಸುತ್ತಿದ್ದಾರೆ. ಉಳಿದ 10 ಅಥವಾ 12 ಮೀಟರ್ ಉದ್ದದ ಬಂಡೆಗಳ ಮೂಲಕ ಕಾರ್ಮಿಕರೇ ಸುರಂಗ ಕೊರೆಯುವುದು ಅಥವಾ ಮೇಲಿನಿಂದ 86 ಮೀಟರ್ ಕೆಳಗೆ ಕೊರೆಯುವುದು.  ರಂದ್ರ ಕೊರೆಯುತ್ತಿದ್ದ ಅಮೆರಿಕದ ಅಗರ್ ಯಂತ್ರದ ಬ್ಲೇಡ್ ಗಳು ಪೈಪ್ ಗೆ ಬಡಿದ ಕಾರಣ ಶುಕ್ರವಾರ ರಕ್ಷಣಾ ಕಾರ್ಯವನ್ನು ನಿಲ್ಲಿಸಲಾಗಿತ್ತು. ಇದೇ ರೀತಿಯ ಅಡ್ಡಿಯಿಂದಾಗಿ ಮೂರು ದಿನಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಈ ಮಧ್ಯೆ ಕಾರ್ಮಿಕರ ಕುಟುಂಬಸ್ಥರು ರಕ್ಷಣಾ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ದೂರಿದ್ದಾರೆ.  ಆರು ಇಂಚು ಅಗಲದ ಪೈಪ್‌ಲೈನ್ ಮೂಲಕ ಆಹಾರ, ಔಷಧಿಗಳು ಮತ್ತಿತರ ಅಗತ್ಯ ವಸ್ತುಗಳನ್ನು ಕಾರ್ಮಿಕರಿಗೆ ಕಳುಹಿಸಲಾಗುತ್ತಿದೆ. ಕಾರ್ಮಿಕರು ಅವರ ಕುಟುಂಬ ಸದಸ್ಯರೊಂದಿಗೆ ನಿತ್ಯ ಮಾತನಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com