ಸಿಲ್ಕ್ಯಾರ ಟನಲ್ ರಕ್ಷಣಾ ಕಾರ್ಯಾಚರಣೆ: ಹೈದರಾಬಾದ್ ನಿಂದ ಪ್ಲಾಸ್ಮಾ ಕಟರ್ ಸ್ಥಳಕ್ಕೆ ಆಗಮನ 

ಸಿಲ್ಕ್ಯಾರ ಟನಲ್ ನಲ್ಲಿ ಸಿಲುಕಿರುವವರ ರಕ್ಷಣೆಗೆ ಬಂದಿದ್ದ ಆಗರ್ ಯಂತ್ರಕ್ಕೆ ಹಾನಿಯಾಗಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿರುವ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಹೈದರಾಬಾದ್ ನಿಂದ ಪ್ಲಾಸ್ಮಾ ಕಟರ್ ನ್ನು ತರಿಸಲಾಗಿದೆ.
ಸಿಲ್ಕ್ಯಾರ ಟನಲ್
ಸಿಲ್ಕ್ಯಾರ ಟನಲ್

ನವದೆಹಲಿ: ಸಿಲ್ಕ್ಯಾರ ಟನಲ್ ನಲ್ಲಿ ಸಿಲುಕಿರುವವರ ರಕ್ಷಣೆಗೆ ಬಂದಿದ್ದ ಆಗರ್ ಯಂತ್ರಕ್ಕೆ ಹಾನಿಯಾಗಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿರುವ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಹೈದರಾಬಾದ್ ನಿಂದ ಪ್ಲಾಸ್ಮಾ ಕಟರ್ ನ್ನು ತರಿಸಲಾಗಿದೆ.
 
ಕುಸಿತ ಕಂಡಿರುವ ಟನಲ್ ನಲ್ಲಿ ಕಳೆದ 14 ದಿನಗಳಿಂದ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗಾಗಿ ಆಗರ್ ಯಂತ್ರವನ್ನು ಸಂಪೂರ್ಣವಾಗಿ ಬೇರ್ಪಡಿಸಬೇಕಿದೆ. 

ಡ್ರಿಲ್ ಯಂತ್ರದ ಒಂದು ಭಾಗವನ್ನು ಬೆಟ್ಟದ ಮೇಲೆ, ಸುರಂಗದ ಮೇಲೆ, ಲಂಬ ಕೊರೆಯುವಿಕೆಗಾಗಿ ಕಳುಹಿಸಲಾಗಿದೆ.

ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನ ಇಂಜಿನಿಯರ್ ಗುಂಪಿನ ಮದ್ರಾಸ್ ಸ್ಯಾಪರ್ಸ್‌ನ ಘಟಕ ಭಾನುವಾರ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಸ್ಥಳಕ್ಕೆ ಆಗಮಿಸಿದ್ದು, ಕುಸಿದ ಸಿಲ್ಕ್ಯಾರಾ ಸುರಂಗದ ಅವಶೇಷಗಳಲ್ಲಿ ಕೊರೆಯುವ ಆಗರ್ ಯಂತ್ರದ ಬ್ಲೇಡ್‌ಗಳು ಸಿಲುಕಿಕೊಂಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com