ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: ಎಕ್ಯುಐ 400!

ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರ ಕುಸಿತ ಕಂಡಿದೆ. ದಟ್ಟವಾದ ಹೊಗೆ ಆವರಿಸಿದೆ.
ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರ ಕುಸಿತ
ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರ ಕುಸಿತ

ನವದೆಹಲಿ: ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರ ಕುಸಿತ ಕಂಡಿದೆ. ದಟ್ಟವಾದ ಹೊಗೆ ಆವರಿಸಿದೆ. ವಾಯುಮಾಲಿನ್ಯದ ಪರಿಣಾಮ ದೆಹಲಿಯಲ್ಲಿ ಕೇವಲ 600 ಮೀಟರ್ ಗಳ ವ್ಯಾಪ್ತಿಯಲ್ಲಿರುವುದು ಮಾತ್ರ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ.  ಇಂದಿರ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 800 ಮೀಟರ್ ನಷ್ಟು ಗೋಚರತೆ ಇದೆ. 

ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಹಗಲಿನಲ್ಲಿ  ಗಾಳಿಯ ವೇಗ ಸ್ವಲ್ಪ ಹೆಚ್ಚಿರಲಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿರುವ ಸಾಧ್ಯತೆ ಇದ್ದು, ರಿಲೀಫ್ ದೊರೆಯಲಿದೆ ಎಂದು ಹೇಳಿದೆ.
 
ಪ್ರತಿಕೂಲ ವಾತಾವರಣವು ಎರಡರಿಂದ ಮೂರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ 9 ಗಂಟೆಗೆ 400 ರಷ್ಟಿತ್ತು. 24 ಗಂಟೆಗಳಲ್ಲಿ 400 ಎಕ್ಯುಐ ಅಂದರೆ ಒಂದು ದಿನದಲ್ಲಿ 22 ಸಿಗರೇಟ್ ಸೇದಿದಷ್ಟಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com