ಲಂಚ ಪ್ರಕರಣ: ಸಮೀರ್ ವಾಂಖೆಡೆಗೆ ಬಾಂಬೆ ಹೈಕೋರ್ಟ್‌ನಿಂದ ರಿಲೀಫ್; ಜನವರಿ 10 ರವರೆಗೆ ಮಧ್ಯಂತರ ರಕ್ಷಣೆ

ಸುಲಿಗೆ ಮತ್ತು ಲಂಚ ಪ್ರಕರಣದಲ್ಲಿ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆಗೆ ಬಾಂಬೆ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಸಮೀರ್ ವಾಂಖೆಡೆ ಮೇಲಿನ ಯಾವುದೇ ಬಲವಂತದ ಕ್ರಮದಿಂದ ಜನವರಿ 10ರವರೆಗೆ ಮಧ್ಯಂತರ ರಕ್ಷಣೆಯನ್ನು ಹೈಕೋರ್ಟ್ ವಿಸ್ತರಿಸಿದೆ.
ಸಮೀರ್ ವಾಂಖೆಡೆ
ಸಮೀರ್ ವಾಂಖೆಡೆ
Updated on

ಮುಂಬೈ: ಸುಲಿಗೆ ಮತ್ತು ಲಂಚ ಪ್ರಕರಣದಲ್ಲಿ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆಗೆ ಬಾಂಬೆ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಸಮೀರ್ ವಾಂಖೆಡೆ ಮೇಲಿನ ಯಾವುದೇ ಬಲವಂತದ ಕ್ರಮದಿಂದ ಜನವರಿ 10ರವರೆಗೆ ಮಧ್ಯಂತರ ರಕ್ಷಣೆಯನ್ನು ಹೈಕೋರ್ಟ್ ವಿಸ್ತರಿಸಿದೆ.

2024ರ ಜನವರಿ 10 ಮತ್ತು 11ರಂದು ಸಿಬಿಐ ದಾಖಲಿಸಿದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ವಾಂಖೆಡೆ ಸಲ್ಲಿಸಿರುವ ಮನವಿಯನ್ನು ಆಲಿಸುವುದಾಗಿ ನ್ಯಾಯಮೂರ್ತಿ ಪಿಡಿ ನಾಯಕ್ ಮತ್ತು ನ್ಯಾಯಮೂರ್ತಿ ಎನ್‌ಆರ್ ಬೋರ್ಕರ್ ಅವರ ವಿಭಾಗೀಯ ಪೀಠ ಹೇಳಿದೆ.

ವಾಸ್ತವವಾಗಿ, ಕಾರ್ಡೆಲಿಯಾ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಸುಲಿಗೆ ಮತ್ತು ಲಂಚ ಪ್ರಕರಣದಲ್ಲಿ ಸಮೀರ್ ವಾಂಖೆಡೆಯನ್ನು ಸಿಬಿಐ ಆರೋಪಿ ಎಂದು ಹೆಸರಿಸಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರ ವಿರುದ್ಧ ಸಿಬಿಐ ಮೇ ತಿಂಗಳಲ್ಲಿ ಎಫ್‌ಐಆರ್ ದಾಖಲಿಸಿತ್ತು. ಈ ಪ್ರಕರಣ 2021ರ ವರ್ಷಕ್ಕೆ ಸಂಬಂಧಿಸಿದ್ದು ಸಮೀರ್ ವಾಂಖೆಡೆ ಮತ್ತು ಇತರ ನಾಲ್ವರು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಹೊತ್ತಿದ್ದಾರೆ.

ಘಟನೆ ಏನು?
2021ರ ಅಕ್ಟೋಬರ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಡ್ರಗ್ಸ್ ಹೊಂದಿದ್ದ, ಸೇವಿಸಿದ ಮತ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಯಿತು. ಆದರೆ ಮೂರು ವಾರ ಜೈಲಿನಲ್ಲಿ ಕಳೆದ ನಂತರ, ಹೈಕೋರ್ಟ್ ಆರ್ಯನ್ ಖಾನ್‌ಗೆ ಜಾಮೀನು ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com