ಮಹಾತ್ಮ ಗಾಂಧಿ ಮಹಾಪುರುಷ, ಮೋದಿ ಯುಗಪುರುಷ: ಪ್ರಧಾನಿಯನ್ನು ಹಾಡಿ ಹೊಗಳಿದ ಉಪ ರಾಷ್ಟ್ರಪತಿ ಧನಕರ್‌

ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಕಳೆದ ಶತಮಾನದ ಮಹಾಪುರುಷನಾದರೆ, ನರೇಂದ್ರ ಮೋದಿ ಅವರು 21ನೇ ಶತಮಾನದ ಯುಗಪುರುಷ ಎಂದು ಜಗದೀಪ್‌ ಧನಕರ್‌  ಅವರು ಬಣ್ಣಿಸಿದ್ದಾರೆ.
ಜಗದೀಪ್ ಧನಕರ್
ಜಗದೀಪ್ ಧನಕರ್
Updated on

ಮುಂಬಯಿ: ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಕಳೆದ ಶತಮಾನದ ಮಹಾಪುರುಷನಾದರೆ, ನರೇಂದ್ರ ಮೋದಿ ಅವರು 21ನೇ ಶತಮಾನದ ಯುಗಪುರುಷ ಎಂದು ಜಗದೀಪ್‌ ಧನಕರ್‌  ಅವರು ಬಣ್ಣಿಸಿದ್ದಾರೆ.

ಜೈನ ಚಿಂತಕ ಹಾಗೂ ದಾರ್ಶನಿಕ ಶ್ರೀಮದ್ ರಾಜಚಂದ್ರಜಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಧನ್​ಕರ್, ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಮುಕ್ತಗೊಳಿಸಿದರು. ಹಾಗೆಯೇ, ದೇಶದ ಯಶಸ್ವಿ ಪ್ರಧಾನಿಯಾದ ನರೇಂದ್ರ ಮೋದಿ ಅವರು ಅಭಿವೃದ್ಧಿ ಮೂಲಕ ದೇಶದ ಜನ ಯಾವ ಮಾರ್ಗವನ್ನು ಹಿಡಿಯಬೇಕು, ಎಂತಹ ಏಳಿಗೆ ಹೊಂದಬೇಕು ಎಂಬುದನ್ನು ತೋರಿಸಿಕೊಟ್ಟರು ಎಂದು ಜಗದೀಪ್‌ ಧನಕರ್‌ ಹೇಳಿದರು.

ದೇಶ ಕಂಡ ಧೀಮಂತ ವ್ಯಕ್ತಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ನರೇಂದ್ರ ಮೋದಿ ಅವರ ಮಧ್ಯೆ ಸಾಮ್ಯತೆ ಇದೆ. ಅವರಿಬ್ಬರೂ ಶ್ರೀಮದ್‌ ರಾಜ್‌ಚಂದ್ರಜಿ ಅವರ ಬಗ್ಗೆ ಗೌರವವನ್ನು ಹೊಂದಿದ್ದಾರೆ. ಅವರಿಬ್ಬರೂ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಹಾಗಾಗಿಯೇ, ಒಬ್ಬರು ಕಳೆದ ಶತಮಾನದ ಮಹಾಪುರುಷನಾದರೆ, ಮತ್ತೊಬ್ಬರು ಈ ಶತಮಾನದ ಯುಗಪುರುಷ ಎಂಬುದಾಗಿ ನನಗೆ ಅನಿಸುತ್ತದೆ ಎಂದು ಹೇಳಿದರು.

ಒಂದಷ್ಟು ದುಷ್ಟಶಕ್ತಿಗಳು ದೇಶದ ಏಳಿಗೆಯನ್ನು ವಿರೋಧಿಸಿದವು. ಎಲ್ಲರೂ ಒಗ್ಗೂಡಿ ದೇಶವನ್ನು ಏಳಿಗೆಯತ್ತ ಕೊಂಡೊಯ್ಯುವುದನ್ನು ಒಂದಷ್ಟು ಜನರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ದೇಶದಲ್ಲಿ ಯಾವಾಗಲಾದರೂ ಒಳಿತಾಗುತ್ತಿದ್ದರೆ, ಸಕಾರಾತ್ಮಕ ಸಂಗತಿಗಳು ಘಟಿಸುತ್ತಿದ್ದರೆ, ಒಂದಷ್ಟು ಜನ ಮಾತ್ರ ದುಃಖದಲ್ಲಿದ್ದರು. ಇಂತಹ ಸಂಗತಿಗಳು ದೇಶದಲ್ಲಿ ನಡೆಯಬಾರದು ಎಂದು ಉಪ ರಾಷ್ಟ್ರಪತಿ ಹೇಳಿದರು.

ತುಂಬ ದೇಶಗಳ ಇತಿಹಾಸವು 500ರಿಂದ 700 ವರ್ಷಗಳಷ್ಟು ಹಳೆಯದಾಗಿದೆ. ನಮ್ಮ ದೇಶದ ಇತಿಹಾಸ 5 ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಇದನ್ನು ಅರಿತು ನಾವು ಒಗ್ಗೂಡಿ ಏಳಿಗೆಯತ್ತ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ದೇಶಕ್ಕೆ ದೊಡ್ಡ ಅಪಾಯವೇ ಎದುರಾಗುತ್ತದೆ ಎಂದು ಹೇಳಿದರು.

ಶ್ರೀಮದ್ ರಾಜಚಂದ್ರಜಿ ಅವರು 1867 ರಲ್ಲಿ ಗುಜರಾತ್‌ನಲ್ಲಿ ಜನಿಸಿದರು ಮತ್ತು 1901 ರಲ್ಲಿ ನಿಧನರಾದರು. ಅವರು ಜೈನ ಧರ್ಮದ ಬೋಧನೆಗಳು ಮತ್ತು ಮಹಾತ್ಮ ಗಾಂಧಿಯವರ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ. , ಇಂಗ್ಲೆಂಡ್‌ನಿಂದ ಯುವ ಬ್ಯಾರಿಸ್ಟರ್ ಆಗಿ ಹಿಂದಿರುಗಿದಾಗ ಶ್ರೀಮದ್ ರಾಜಚಂದ್ರಜಿ ಮತ್ತು ಮಹಾತ್ಮ ಗಾಂಧಿಯವರು ಮೊದಲ ಬಾರಿಗೆ 1891 ರಲ್ಲಿ ಮುಂಬೈನಲ್ಲಿ ಭೇಟಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com