ವಂದೇ ಭಾರತ್ ರೈಲುಗಳಲ್ಲಿ '14 ಮಿನಿಟ್ ಮಿರಾಕಲ್' ಸ್ವಚ್ಛತಾ ಅಭಿಯಾನ ಜಾರಿಗೆ ತರಲಿರುವ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ತನ್ನ ವಂದೇ ಭಾರತ್ ರೈಲುಗಳಲ್ಲಿ '14 ಮಿನಿಟ್ ಮಿರಾಕಲ್' ಎಂಬ ನವೀನ ಸ್ವಚ್ಛತಾ ಉಪಕ್ರಮವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ರೈಲ್ವೆ ತನ್ನ ವಂದೇ ಭಾರತ್ ರೈಲುಗಳಲ್ಲಿ '14 ಮಿನಿಟ್ ಮಿರಾಕಲ್' ಎಂಬ ನವೀನ ಸ್ವಚ್ಛತಾ ಉಪಕ್ರಮವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. 

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಚಾಲನೆ ನೀಡಲಿರುವ ಈ ಯೋಜನೆಯಡಿ, ವಂದೇ ಭಾರತ್ ರೈಲುಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸಲಾಗುತ್ತದೆ. ಕೇವಲ 14 ನಿಮಿಷಗಳಲ್ಲಿ ಮುಂದಿನ ಪ್ರಯಾಣಕ್ಕೆ ಸಿದ್ಧಗೊಳಿಸಲಾಗುತ್ತದೆ. ಪ್ರಸ್ತುತ, ರೈಲುಗಳ ಸ್ವಚ್ಛಗೊಳಿಸುವಿಕೆ ಸುಮಾರು 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಈ ವಿನೂತನ ಉಪಕ್ರಮವನ್ನು ಈಗ ದೆಹಲಿ, ಚೆನ್ನೈ, ಪುರಿ ಮತ್ತು ಶಿರಡಿ ಸೇರಿದಂತೆ 29 ರೈಲು ನಿಲ್ದಾಣಗಳಲ್ಲಿ ಎಲ್ಲಾ ವಂದೇ ಭಾರತ್ ರೈಲುಗಳಲ್ಲಿ ಜಾರಿಗೆ ತರಲಾಗುವುದು ಎಂದು ರೈಲ್ವೆ ಸಚಿವರು ಘೋಷಿಸಿದರು. ದೆಹಲಿ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಯೋಜನೆಯನ್ನು ಆರಂಭಿಸಲಾಗುತ್ತದೆ. 

ವಿವಿಧ ಮಾರ್ಗಗಳಾದ್ಯಂತ ಎಲ್ಲಾ ಕಾರ್ಯಾಚರಣೆಯ ವಂದೇ ಭಾರತ್ ರೈಲುಗಳಲ್ಲಿ ಪ್ರತಿದಿನ '14 ನಿಮಿಷದ ಪವಾಡ' ನಡೆಸಲಾಗುವುದು ಎಂದು ಸಚಿವ ವೈಷ್ಣವ್ ಹೇಳಿದರು. ‘14 ನಿಮಿಷದ ಪವಾಡ’ ಭಾನುವಾರ ನಂತರ ಮುಂದುವರಿಯುತ್ತದೆ. ಕೆಲವು ತಿಂಗಳ ನಂತರ, ನಾವು ಈ ಉಪಕ್ರಮವನ್ನು ಇತರ ಎಕ್ಸ್‌ಪ್ರೆಸ್ ರೈಲುಗಳಿಗೂ ವಿಸ್ತರಿಸಲು ಯೋಜಿಸಿದ್ದೇವೆ ಎಂದು ಅವರು ಹೇಳಿದರು.

ವಂದೇ ಭಾರತ್ ರೈಲು ಎಲ್ಲಿ ನಿಂತಿದ್ದರೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಶುಚಿಗೊಳಿಸುವಿಕೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ರೈಲ್ವೆ ನೌಕರರು ಈ ಉಪಕ್ರಮವನ್ನು ಜಾರಿಗೊಳಿಸುತ್ತಾರೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತರ ದೇಶಗಳಲ್ಲಿ ಇದೇ ರೀತಿಯ ಸ್ವಚ್ಛತಾ ಉಪಕ್ರಮಗಳು ಜಾರಿಯಲ್ಲಿವೆ. ಜಪಾನಿನ ರೈಲ್ವೇ ಇದೇ ರೀತಿಯ '7-ಮಿನಿಟ್ ಮಿರಾಕಲ್' ನ್ನು ಬಳಸಿಕೊಳ್ಳುತ್ತದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಪಾನಿನ ರೈಲ್ವೆ ಸಿಬ್ಬಂದಿ ತಮ್ಮ ಬುಲೆಟ್ ರೈಲುಗಳನ್ನು 7 ನಿಮಿಷಗಳಲ್ಲಿ ಸ್ವಚ್ಛಗೊಳಿಸುತ್ತಾರೆ, ಇದರಲ್ಲಿ ಕಸವನ್ನು ಸಂಗ್ರಹಿಸುವುದು, 1,700 ಪ್ರತ್ಯೇಕ ಟೇಬಲ್‌ಗಳನ್ನು ಒರೆಸುವುದು, ಪರದೆಗಳನ್ನು ತೆರೆಯುವುದು, ಆಸನಗಳನ್ನು 180 ಡಿಗ್ರಿಗಳಷ್ಟು ತಿರುಗಿಸುವುದು ಮತ್ತು ರೈಲಿನ ಮುಂಭಾಗವನ್ನು ಎದುರಿಸುವಂತೆ ಇರಿಸುವುದು ಮತ್ತು ಹಲವಾರು ಇತರ ಕೆಲಸಗಳು ಸೇರಿಕೊಂಡಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com