ರಾಷ್ಟ್ರೀಯ ಸ್ಮಾರಕವಾಗಿ 'ರಾಮಸೇತು' ಘೋಷಿಸಲು ನಿರ್ದೇಶನ ಕೋರಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!

'ರಾಮಸೇತು'ವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮತ್ತು ಸ್ಥಳದಲ್ಲಿ ಗೋಡೆಯನ್ನು ನಿರ್ಮಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದ್ದು, ಇದು ಸರ್ಕಾರದ ಆಡಳಿತಾತ್ಮಕ ವಿಷಯಗಳು ಎಂದು ಹೇಳಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: 'ರಾಮಸೇತು'ವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮತ್ತು ಸ್ಥಳದಲ್ಲಿ ಗೋಡೆಯನ್ನು ನಿರ್ಮಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದ್ದು, ಇದು ಸರ್ಕಾರದ ಆಡಳಿತಾತ್ಮಕ ವಿಷಯಗಳು ಎಂದು ಹೇಳಿದೆ.

ಆಡಮ್‌ನ ಸೇತುವೆ ಎಂದೂ ಕರೆಯಲ್ಪಡುವ 'ರಾಮ ಸೇತು' ತಮಿಳುನಾಡಿನ ಆಗ್ನೇಯ ಕರಾವಳಿಯ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸರಪಳಿಯಾಗಿದೆ. ಈ ಅರ್ಜಿಯು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತು.

‘ದಿ ಹಿಂದೂ ಪರ್ಸನಲ್ ಲಾ ಬೋರ್ಡ್’ ಸಂಸ್ಥೆ ತನ್ನ ಅಧ್ಯಕ್ಷ ಅಶೋಕ್ ಪಾಂಡೆ ಮೂಲಕ ಅರ್ಜಿ ಸಲ್ಲಿಸಿದೆ. ವಕೀಲರೂ ಆಗಿರುವ ಪಾಂಡೆ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ಪೀಠಕ್ಕೆ ತಿಳಿಸಿದರು.

ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಸ್ವಾಮಿ ತಮ್ಮ ಮನವಿಯಲ್ಲಿ ಕೋರಿದ್ದಾರೆ. ಮಂಡಳಿ ಸಲ್ಲಿಸಿರುವ ಮನವಿಯನ್ನು ಸ್ವಾಮಿ ಅವರ ಬಾಕಿ ಇರುವ ಅರ್ಜಿಯೊಂದಿಗೆ ಟ್ಯಾಗ್ ಮಾಡಬೇಕು ಎಂದು ಪಾಂಡೆ ಪೀಠವನ್ನು ಒತ್ತಾಯಿಸಿದರು. "ಅದು ಬಾಕಿ ಇದ್ದರೆ, ಇರುತ್ತದೆ ನಿಮಗೆ ಏನಾಗಬೇಕು ಎಂದು ನ್ಯಾಯಪೀಠ ಕೇಳಿತು.

ಸೈಟ್ನಲ್ಲಿ ಗೋಡೆಯ ನಿರ್ಮಾಣಕ್ಕಾಗಿ ಅವರು ತಮ್ಮ ಮನವಿ ಉಲ್ಲೇಖಿಸಿದಾಗ, ಪೀಠವು "ಎರಡು ಬದಿಗಳಲ್ಲಿ ಗೋಡೆಯನ್ನು ಹೇಗೆ ನಿರ್ಮಿಸಬಹುದು?" "ಇದು ನ್ಯಾಯಾಲಯ ಮಾಡಬೇಕೇ? ಇವು ಸರ್ಕಾರದ ಆಡಳಿತಾತ್ಮಕ ವಿಷಯಗಳು. ನಾವೇಕೆ  ಇದರಲ್ಲಿ ಭಾಗಿಯಾಗಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬಾಕಿ ಉಳಿದಿರುವ ಅರ್ಜಿಯೊಂದಿಗೆ ಅವರ ಮನವಿಯನ್ನು ಟ್ಯಾಗ್ ಮಾಡಬೇಕೆಂಬ ಅರ್ಜಿದಾರರ ಮನವಿಯನ್ನು ಸಮ್ಮತಿಸಲು ಪೀಠ ನಿರಾಕರಿಸಿತು. ಅರ್ಜಿದಾರರು ಬಯಸಿದಂತೆ ನಿರ್ದೇಶನದ ಯಾವುದೇ ಸ್ವರೂಪವನ್ನು ನೀಡಲು ಭಾರತದ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ನಾವು ಒಲವು ಹೊಂದಿಲ್ಲ" ಎಂದು ಪೀಠವು ಮನವಿಯನ್ನು ಪರಿಗಣಿಸಲು ನಿರಾಕರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com