ಉಜ್ವಲ ಗ್ರಾಹಕರ ಎಲ್‌ಪಿಜಿ ಸಬ್ಸಿಡಿ ಮೊತ್ತ 200 ರೂ. ನಿಂದ 300 ರೂ.ಗೆ ಹೆಚ್ಚಿಸಿದ ಕೇಂದ್ರ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು 200 ರೂ.ನಿಂದ 300 ರೂ.ಗೆ ಸರ್ಕಾರ ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು 200 ರೂ.ನಿಂದ 300 ರೂ.ಗೆ ಸರ್ಕಾರ ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾ ತೆಗೆದುಕೊಳ್ಳಲಾಗಿದ್ದು, ಉಜ್ವಲಾ ಯೋಜನೆಯ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್‌ಗೆ 703 ರೂ.ಗಳನ್ನು ಪಾವತಿಸುತ್ತಿದ್ದಾರೆ. ಇದರ ಮಾರುಕಟ್ಟೆ ಬೆಲೆ 903 ರೂ. ಇದ್ದು, ಈಗ ಅದನ್ನು ಈಗ 603 ರೂ. ಇಳಿಸಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಈ ಹಿಂದೆ ಪಿಎಂ ಉಜ್ವಲ ಯೋಜನೆ ಹೊಂದಿರುವವರಿಗೆ 200 ರೂ. ಸಬ್ಸಿಡಿ ನೀಡಿತ್ತು. ಈಗ ಮತ್ತೆ 100 ರೂ ಸಬ್ಸಿಡಿ ಒದಗಿಸುತ್ತಿದೆ. ಅಲ್ಲಿಗೆ ಈ ಯೋಜನೆಯ ಫಲಾನುಭವಿಗಳಿಗೆ ಒಟ್ಟು 300 ರೂ. ಸಬ್ಸಿಡಿ ಸಿಗುತ್ತದೆ. ಇದರೊಂದಿಗೆ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಅನ್ನು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳು ಬೆಂಗಳೂರಿನಲ್ಲಿ 605.50 ರೂಪಾಯಿಗೆ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com