'ಜವಾನ್' ನಟ ಶಾರುಖ್ ಖಾನ್ ಗೆ ಧನ್ಯವಾದ ಸಲ್ಲಿಸಿದ ಡಾ. ಕಫೀಲ್ ಖಾನ್! ಕಾರಣ ಏನು ಗೊತ್ತಾ?

2017 ರ ಗೋರಖ್‌ಪುರ ಆಸ್ಪತ್ರೆ ಸಾವಿನ ಪ್ರಕರಣದಲ್ಲಿ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳುವ ಡಾ. ಕಫೀಲ್ ಖಾನ್, ನಟ ಶಾರುಖ್ ಖಾನ್ ಅವರ ಇತ್ತೀಚಿನ ಬ್ಲಕ್ ಬಸ್ಟರ್ ಚಿತ್ರ 'ಜವಾನ್‌'ನಲ್ಲಿ ಘಟನೆಯನ್ನು ಚಿತ್ರಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. 
ಡಾ. ಕಫೀಲ್ ಖಾನ್
ಡಾ. ಕಫೀಲ್ ಖಾನ್

ನವದೆಹಲಿ: 2017 ರ ಗೋರಖ್‌ಪುರ ಆಸ್ಪತ್ರೆ ಸಾವಿನ ಪ್ರಕರಣದಲ್ಲಿ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳುವ ಡಾ. ಕಫೀಲ್ ಖಾನ್, ನಟ ಶಾರುಖ್ ಖಾನ್ ಅವರ ಇತ್ತೀಚಿನ ಬ್ಲಕ್ ಬಸ್ಟರ್ ಚಿತ್ರ 'ಜವಾನ್‌'ನಲ್ಲಿ ಘಟನೆಯನ್ನು ಚಿತ್ರಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಜವಾನ್ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮಾಡಿರುವ ಪಾತ್ರ ಡಾ. ಖಾನ್‌ ಅನುಭವಿಸಿರುವ ಅನುಭವದಂತಿದೆ. ಅವರು ಆರಂಭದಲ್ಲಿ ಹೀರೋ ಎಂದು ಪ್ರಶಂಸಿಸಲ್ಪಟ್ಟಿರುತ್ತಾರೆ. ಆದರೆ ದುರಂತದಲ್ಲಿ ಅವರ ಪಾತ್ರಕ್ಕಾಗಿ ನಂತರ ಬಂಧಿಸಿ, ಜೈಲಿಗೆ ಹಾಕಲಾಗುತ್ತದೆ. 

ಈ ಕುರಿತು ಶಾರುಖ್ ಖಾನ್ ಗೆ ಪತ್ರ ಬರೆದಿರುವ ಡಾ. ಕಫೀಲ್ ಖಾನ್, ಜವಾನ್" ಒಂದು ಕಾಲ್ಪನಿಕ ಕೃತಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಗೋರಖ್‌ಪುರ ದುರಂತಕ್ಕೆ ಅದು ಹೋಲಿಕೆಯಾಗಲಿದ್ದು, ವ್ಯವಸ್ಥಿತ ವೈಫಲ್ಯಗಳು, ನಿರಾಸಕ್ತಿ ಮತ್ತು ಮುಖ್ಯವಾಗಿ, ಕಳೆದುಹೋದ ಮುಗ್ಧ ಜೀವಗಳ ಪ್ರಬಲ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಬರೆದಿದ್ದಾರೆ. 

ಸನ್ಯಾ ಮಲ್ಹೋತ್ರಾ ಮಾಡಿರುವ ಪಾತ್ರ ನನ್ನನ್ನು ನೇರವಾಗಿ ಉಲ್ಲೇಖಿಸದಿದ್ದರೂ, ನಾನು ಎದುರಿಸಿದ ಅನುಭವಗಳನ್ನು ಒಳಗೊಂಡಿದೆ. 'ಗೋರಖ್‌ಪುರ ಆಸ್ಪತ್ರೆ ದುರಂತ'ದ ನಿಜವಾದ ಅಪರಾಧಿ ಸಿಕ್ಕಿಬಿದ್ದಿದ್ದಾನೆ ಎಂಬುದಕ್ಕೆ ಸಂತೋಷವಾಗಿದೆ. ಆದರೆ ನಿಜ ಜೀವನದಲ್ಲಿ ನಿಜವಾದ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ, ನಾನು ಇನ್ನೂ ನನ್ನ ಕೆಲಸವನ್ನು ಮರಳಿ ಪಡೆಯಲು ಹೆಣಗಾಡುತ್ತಿದ್ದೇನೆ ಮತ್ತು ತಮ್ಮ ಮಕ್ಕಳನ್ನು ಕಳೆದುಕೊಂಡ 63 ಪೋಷಕರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ. 

2017ರ ಆಗಸ್ಟ್ ನಲ್ಲಿ ನಡೆದಿದ್ದ ಈ ಪ್ರಕರಣ ರಾಷ್ಟ್ರವ್ಯಾಪಿ ಗಮನ ಸೆಳೆಯಿತು, ಉತ್ತರ ಪ್ರದೇಶದ ಗೋರಖ್‌ಪುರ ನಗರದ ಸರ್ಕಾರಿ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದರು. ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಪಾವತಿಸದೆ ಪೂರೈಕೆ ಸ್ಥಗಿತಗೊಂಡಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿತ್ತು.  ಜೀವ ಉಳಿಸುವ ಪ್ರಯತ್ನದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಲು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿರುವುದಾಗಿ ಡಾ. ಖಾನ್ ಹೇಳಿಕೊಂಡಿದ್ದರು.

ಆರಂಭದಲ್ಲಿ ಅವರ ಧೀರ ಪ್ರಯತ್ನಗಳಿಗಾಗಿ ಪ್ರಶಂಸಿಸಲ್ಪಟ್ಟಿದ್ದರು. ಆದರೆ ತದ ನಂತರ, ಕರ್ತವ್ಯ ಲೋಪದ ಆರೋಪದ ಮೇಲೆ ಅವರನ್ನು ನೋಡಲ್ ಅಧಿಕಾರಿ ಹುದ್ದೆಯಿಂದ ಕಿತ್ತುಹಾಕಲಾಗಿತ್ತು. 2019ರಲ್ಲಿ ಅವರನ್ನು ಆರೋಪ ಮುಕ್ತಗೊಳಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com