'ಜವಾನ್' ಸಕ್ಸಸ್ ಇವೆಂಟ್,  ಶಾರೂಕ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ- ಫೋಟೋ, ವಿಡಿಯೋ ವೈರಲ್!

ಬಾಲಿವುಡ್ ನಟ ಶಾರೂಕ್ ಖಾನ್ ಕೆನ್ನೆಗೆ ದೀಪಿಕಾ ಪಡುಕೋಣೆ ಮುತ್ತಿಡುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಶಾರೂಖ್ ಖಾನ್  ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ
ಶಾರೂಖ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ
Updated on

ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಕೆನ್ನೆಗೆ ದೀಪಿಕಾ ಪಡುಕೋಣೆ ಮುತ್ತಿಡುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಜವಾನ್ ಚಿತ್ರದ ಸಕ್ಸಸ್ ಇವೆಂಟ್ ನಲ್ಲಿ ಇದು ನಡೆದಿದೆ. ಹಾಡಿನಲ್ಲಿ ಕಿಂಗ್ ಖಾನ್ ಜೊತೆ ಡ್ಯಾನ್ಸ್ ಮಾಡಿ ನಂತರ ದೀಪಿಕಾ ಪಡುಕೋಣೆ ಮುತ್ತಿಟ್ಟಿದ್ದಾರೆ. ನಂತರ ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್ ಅವರ ಕೆನ್ನೆಗೆ ದೀಪಿಕಾ ಪಡುಕೋಣೆ ಮುತ್ತಿಟ್ಟಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ಫೋಟೋ ನೋಡಿದ ದೀಪಿಕಾ ಪತಿ ನಟ ರಣವೀರ್ ಸಿಂಗ್ ಜವಾನ್​ನ 'ಚಲೇಯಾ' ಹಾಡಿನ ಒಂದು ಸಾಲನ್ನು ಕಮೆಂಟ್ ಬಾಕ್ಸ್​ನಲ್ಲಿ ಹಾಕಿದ್ದಾರೆ. ರಣವೀರ್ ಸಿಂಗ್ ಕಮೆಂಟ್ ಗೆ ಅನೇಕ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಜವಾನ್ ಚಿತ್ರದಲ್ಲಿ ನಯನತಾರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಸೌತ್ ಸ್ಟಾರ್ ವಿಜಯ್ ಸೇತುಪತಿ ಮತ್ತು ಸಂಜಯ್ ದತ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಇದುವರೆಗೆ 660 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com