ಇಸ್ರೇಲ್ ನಲ್ಲಿ ಹಮಾಸ್ ಗೆ ಸೆರೆಯಾಳುಗಳಾದ 17 ನೇಪಾಳಿಗಳು!

ಇಸ್ರೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಕನಿಷ್ಠ 17 ಮಂದಿ ನೇಪಾಳ ವಿದ್ಯಾರ್ಥಿಗಳು ಹಮಾಸ್ ಸೆರೆಗೆ ಸಿಲುಕಿದ್ದಾರೆ.
ಇಸ್ರೇಲ್ ನಲ್ಲಿ ಹಮಾಸ್ ದಾಳಿ
ಇಸ್ರೇಲ್ ನಲ್ಲಿ ಹಮಾಸ್ ದಾಳಿ

ನವದೆಹಲಿ: ಇಸ್ರೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಕನಿಷ್ಠ 17 ಮಂದಿ ನೇಪಾಳ ವಿದ್ಯಾರ್ಥಿಗಳು ಹಮಾಸ್ ಸೆರೆಗೆ ಸಿಲುಕಿದ್ದಾರೆ.

ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ ಈ ವರೆಗೂ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇಸ್ರೇಲಿ ಮಹಿಳೆಯರನ್ನು ಹತ್ಯೆ ಮಾಡಿ ಅವರ ನಗ್ನ ದೇಹಗಳನ್ನು ಹಮಾಸ್ ಮೆರವಣಿಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗತೊಡಗಿದ್ದು, ಹಮಾಸ್ ದಾಳಿಗೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿದೆ.

ಹರ್ಜ್ಲಿಯಾದಲ್ಲಿ ಇಸ್ರೇಲ್ ಸರ್ಕಾರದ "ಲರ್ನ್&ಅರ್ನ್ (Learn and Earn)" ಕಾರ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿದ್ದ  7 ನೇಪಾಳಿ ವಿದ್ಯಾರ್ಥಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ, ಜೊತೆಗೆ ದಕ್ಷಿಣ ಇಸ್ರೇಲ್‌ನ ಅಲ್ಯುಮಿಮ್‌ನಲ್ಲಿರುವ ಕೃಷಿ ಫಾರ್ಮ್‌ನಲ್ಲಿ 10 ನೇಪಾಳಿ ವಿದ್ಯಾರ್ಥಿಗಳನ್ನು ಹಮಾಸ್ ಪಡೆಗಳು ಸೆರೆಯಲ್ಲಿ ಇರಿಸಿಕೊಂಡಿವೆ ಎಂದು ಇಸ್ರೇಲ್‌ ನಲ್ಲಿರುವ ನೇಪಾಳದ ರಾಯಭಾರಿ ಕಾಂತಾ ರಿಜಾಲ್ ಹೇಳಿದ್ದಾರೆ.

ನೇಪಾಳದ ರಾಯಭಾರಿ ಪ್ರಕಾರ, ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ತಂಡಗಳಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com