ಅಕ್ರಮ ಮತಾಂತರ: ಉತ್ತರ ಪ್ರದೇಶದಲ್ಲಿ 9 ಮಂದಿಯ ಬಂಧನ

ಉತ್ತರ ಪ್ರದೇಶದ ಕೊಶಂಬಿಯಲ್ಲಿ ಅಕ್ರಮವಾಗಿ ಧಾರ್ಮಿಕ ಮತಾಂತರ ಮಾಡಿಸಿದ ಆರೋಪದ ಮೇಲೆ ಗ್ರಾಮವೊಂದರಲ್ಲಿ ಒಂಬತ್ತು ಜನರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒತ್ತಾಯಪೂರ್ವಕ ಮತಾಂತರದ ವಿರುದ್ಧದ ಪ್ರತಿಭಟನೆ
ಒತ್ತಾಯಪೂರ್ವಕ ಮತಾಂತರದ ವಿರುದ್ಧದ ಪ್ರತಿಭಟನೆ

ಕೌಶಂಬಿ: ಉತ್ತರ ಪ್ರದೇಶದ ಕೊಶಂಬಿಯಲ್ಲಿ ಅಕ್ರಮವಾಗಿ ಧಾರ್ಮಿಕ ಮತಾಂತರ ಮಾಡಿಸಿದ ಆರೋಪದ ಮೇಲೆ ಗ್ರಾಮವೊಂದರಲ್ಲಿ ಒಂಬತ್ತು ಜನರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹುಲಿತಿರ್ ಗ್ರಾಮದ ಶಿವಶಂಕರ್ ಎಂಬುವರ ಮನೆಯಲ್ಲಿ ಕೆಲವರು ಆಮಿಷಗಳ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸೈನಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.

ಅನಾರೋಗ್ಯ ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಗ್ರಾಮಸ್ಥರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿದ ನಂತರ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು 9 ಮಂದಿಯನ್ನು ಬಂಧಿಸಲಾಗಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಮಾಹುಲಿ ತೀರ್ ಗ್ರಾಮದ ನಿವಾಸಿಗಳಾದ ಜೂರಿಲಾಲ್, ವೀರೇಂದ್ರ, ಶಿವಶಂಕರ್, ಚಿಂಗಾ, ಬ್ರಿಜೇಶ್ ಪಟೇಲ್, ಚಕ್ರಧಾರಿ, ತೇದಿ ಮಾಡ್ ತುಳಬುಳದ ಪವನ್ ಕುಮಾರ್, ಛೇದಿಲಾಲ್ ಮತ್ತು ಅರುಣ್ ಕುಮಾರ್ ಮೌರ್ಯ ಎಂಬ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com