ಡಿಎಂಕೆ ಸಂಸದ ಎ ರಾಜಾಗೆ ಸೇರಿದ 15 ಬೇನಾಮಿ ಆಸ್ತಿ ಇಡಿ ವಶಕ್ಕೆ!

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಮತ್ತು ಡಿಎಂಕೆ ಸಂಸದ ಎ. ರಾಜಾಗೆ ಸೇರಿದ ಸುಮಾರು 55 ಕೋಟಿ ರೂಪಾಯಿ ಮೌಲ್ಯದ 15 ಸ್ಥಿರ 'ಬೇನಾಮಿ' ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ಸಂಸದ ಎ ರಾಜಾ
ಸಂಸದ ಎ ರಾಜಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಮತ್ತು ಡಿಎಂಕೆ ಸಂಸದ ಎ. ರಾಜಾಗೆ ಸೇರಿದ ಸುಮಾರು 55 ಕೋಟಿ ರೂಪಾಯಿ ಮೌಲ್ಯದ 15 ಸ್ಥಿರ 'ಬೇನಾಮಿ' ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.

ಎ ರಾಜಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ, ಅವರ ಬೇನಾಮಿ ಕಂಪನಿ ಕೋವೈ ಶೆಲ್ಟರ್ಸ್ ಪ್ರಮೋಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಸ್ವಾಧೀನಪಡಿಸಿಕೊಂಡಿರುವ 15 ಸ್ಥಿರ ಆಸ್ತಿಗಳನ್ನು ಪಿಎಂಎಲ್‌ಎ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ 45 ಎಕರೆ ಜಮೀನಿನ ಆಸ್ತಿಯನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಡಿ ಜಪ್ತಿ ಮಾಡಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ತೀರ್ಪು ನೀಡುವ ಪ್ರಾಧಿಕಾರವು ಜೂನ್ 1ರಂದು ಈ ಆದೇಶವನ್ನು ಅನುಮೋದಿಸಿತ್ತು.

ಬೇನಾಮಿ ಆಸ್ತಿಗಳೆಂದರೆ ಆಸ್ತಿಯನ್ನು ಯಾರ ಹೆಸರಿಗೆ ತೆಗೆದುಕೊಳ್ಳಲಾಗಿದೆಯೋ ಆ ವ್ಯಕ್ತಿ ಬದಲಿಗೆ ಬೇರೆಯವರ ಹೆಸರಲ್ಲಿ ಖಾತೆ ಮಾಡಿಸುವುದು. ರಾಜಾ ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಡಿಎಂಕೆ ಸಂಸದರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com