ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ 9 ನಗರಗಳ 20 ಧಾರ್ಮಿಕ ಸ್ಥಳಗಳಲ್ಲಿ 3000 ಪಿಂಕ್ ಬೂತ್‌ ಸ್ಥಾಪನೆ

ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯಾದ್ಯಂತ 3,000 ಪಿಂಕ್ ಬೂತ್‌ಗಳನ್ನು(ಪೊಲೀಸ್ ಬೂತ್‌ಗಳು) ಸ್ಥಾಪಿಸಲು ಸಜ್ಜಾಗಿದೆ. ಸೇಫ್ ಸಿಟಿ ಯೋಜನೆಯಡಿ...
Published on

ಲಖನೌ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯಾದ್ಯಂತ 3,000 ಪಿಂಕ್ ಬೂತ್‌ಗಳನ್ನು(ಪೊಲೀಸ್ ಬೂತ್‌ಗಳು) ಸ್ಥಾಪಿಸಲು ಸಜ್ಜಾಗಿದೆ. ಸೇಫ್ ಸಿಟಿ ಯೋಜನೆಯಡಿ ಎಲ್ಲಾ 10417 ಮಹಿಳಾ-ಬೀಟ್ ಸಿಬ್ಬಂದಿಗೆ ಪಿಂಕ್ ಸ್ಕೂಟಿಗಳನ್ನು ನೀಡಲಾಗುತ್ತಿದೆ.

ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಸಂಸ್ಥೆ ಈಗಾಗಲೇ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಒಪ್ಪಿಗೆ ಬಳಿಕ ಶೀಘ್ರದಲ್ಲಿಯೇ ಜಾರಿಯಾಗುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದ ವಕ್ತಾರರ ಪ್ರಕಾರ, ಸೇಫ್ ಸಿಟಿ ಯೋಜನೆಯು ಉತ್ತರ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಜಾರಿಗೊಳ್ಳಲಿದೆ. ಮೊದಲ ಹಂತದಲ್ಲಿ, ಉತ್ತರ ಪ್ರದೇಶದ ಒಂಬತ್ತು ನಗರಗಳಲ್ಲಿರುವ 20 ಧಾರ್ಮಿಕ ಸ್ಥಳಗಳಲ್ಲಿ ಪಿಂಕ್ ಬೂತ್‌ಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

17 ಮುನ್ಸಿಪಲ್ ಕಾರ್ಪೊರೇಷನ್‌ಗಳು ಮತ್ತು ಗೌತಮ್ ಬುದ್ಧನಗರ ವ್ಯಾಪ್ತಿಯಲ್ಲಿ 550 ಪೊಲೀಸ್ ಠಾಣೆಗಳ 1100 ಮಹಿಳಾ ಬೀಟ್ ಕಾನ್‌ಸ್ಟೆಬಲ್‌ಗಳಿಗೆ ಜಿಪಿಎಸ್ ಹೊಂದಿದ ಪಿಂಕ್ ಸ್ಕೂಟರ್‌ಗಳನ್ನು ನೀಡಲಾಗುತ್ತಿದೆ.

ಎರಡನೇ ಹಂತದಲ್ಲಿ, 57 ಜಿಲ್ಲಾ ಕೇಂದ್ರಗಳ ಪುರಸಭೆಗಳಲ್ಲಿ 501 ಪಿಂಕ್ ಬೂತ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಮೂರನೇ ಹಂತದಲ್ಲಿ, ಉಳಿದ 143 ಪುರಸಭೆಗಳಲ್ಲಿ ಸುರಕ್ಷಿತ ನಗರ ಯೋಜನೆಯೊಂದಿಗೆ 2,480 ಪಿಂಕ್ ಬೂತ್‌ಗಳನ್ನು ಸಂಪರ್ಕಿಸಲಾಗುತ್ತದೆ.

X

Advertisement

X
Kannada Prabha
www.kannadaprabha.com