ಪ್ಯಾಲೆಸ್ತೀನಿಯರ ಬಗ್ಗೆ ಮರುಕಪಡುವವರು ತಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆಯೂ ಮರುಕ ಪಡುಬೇಕಲ್ಲವೇ?: ಬಾಂಗ್ಲಾದೇಶ ವಿರುದ್ಧ ತಸ್ಲೀಮಾ ನಸ್ರೀನ್ ಕಿಡಿ
ನವದೆಹಲಿ: ಪ್ಯಾಲೆಸ್ತೀನಿಯರ ಬಗ್ಗೆ ಮರುಕಪಡುವವರು ತಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆಯೂ ಮರುಕ ಪಡುಬೇಕಲ್ಲವೇ? ಎಂದು ಬಾಂಗ್ಲಾದೇಶದ ವಿರುದ್ಧ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ.
ಇಸ್ಲಾಮಿಕ್ ರಾಷ್ಟ್ರಗಳು ಪ್ಯಾಲೆಸ್ತೀನ್ ಜೊತೆ ನಿಲ್ಲಬೇಕು ಎಂಬ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ಕರೆ ನೀಡಿದ್ದು ಮಾತ್ರವಲ್ಲದೇ ಇಸ್ರೇಲ್ ಮತ್ತು ಗಾಜಾಪಟ್ಟಿ ವಿಚಾರದ ಬಗ್ಗೆ ಚರ್ಚಿಸಲು ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆದಿದೆ. ಈ ಸಭೆ ನಡುವೆಯೇ ಲೇಖಕಿ ತಸ್ಲೀಮಾ ನಸ್ರೀನ್ ಸಂದರ್ಶನವೊಂದರಲ್ಲಿ ತಮ್ಮದೇ ದೇಶ ಬಾಂಗ್ಲಾದೇಶದ ವಿರುದ್ಧ ಕಿಡಿಕಾರಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ಯಾಲೆಸ್ಟೀನಿಯನ್ನರ ವಿರುದ್ಧದ ದೌರ್ಜನ್ಯದ ಬಗ್ಗೆ ಮರುಕ ಪಡುವವರು ತಮ್ಮದೇ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆಯೂ ಮರುಕಪಡಬೇಕು ಎಂದು ಹೇಳಿದ್ದಾರೆ.
‘ಪ್ಯಾಲೆಸ್ಟೀನಿಯನ್ನರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಬಾಂಗ್ಲಾದೇಶಿಗರು ಆತಂಕಿತರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕೆಲವರು ಪ್ಯಾಲೆಸ್ಟೀನ್‌ಗೆ ತೆರಳಲೂ ಬಯಸಿದ್ದಾರೆ ಎಂದು ಕೇಳ್ಪಟ್ಟೆ. ವೈಯಕ್ತಿಕವಾಗಿ ಜಗತ್ತಿನಲ್ಲಿ ನಡೆಯುವ ಎಲ್ಲಾ ರೀತಿಯ ದೌರ್ಜನ್ಯವನ್ನು ನಾನು ಖಂಡಿಸುತ್ತೇನೆ.
ಆದರೆ ಪ್ಯಾಲೆಸ್ಟೀನಿಯನ್ನರ ಬಗ್ಗೆ ಮರುಕ ಪಡುತ್ತಿರುವವರು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ಆಕ್ರಮಣದ ಬಗ್ಗೆಯೂ ಚಿಂತಿಸಬೇಕು. ಬಾಂಗ್ಲಾದೇಶವು ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದ್ದರೂ ಮೂಲಭೂತವಾದ ಹೆಚ್ಚುತ್ತಿದೆ. ಲಿಂಗ ಅಸಮಾನತೆ ಪ್ರಮುಖ ಸಮಸ್ಯೆಯಾಗಿ ಮುಂದುವರೆದಿದೆ’ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ