ಸಿಕ್ಕಿಂ ಪ್ರವಾಹ: ಮೃತರ ಸಂಖ್ಯೆ 40ಕ್ಕೆ ಏರಿಕೆ, ಎರಡು ವಾರಗಳ ನಂತರವೂ 76 ಜನ ಇನ್ನೂ ನಾಪತ್ತೆ!

ಇನ್ನೂ ಎರಡು ಶವಗಳು ಪತ್ತೆಯಾಗುವುದರೊಂದಿಗೆ ಸಿಕ್ಕಿಂನಲ್ಲಿನ ಪ್ರವಾಹದಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿದೆ. ಆದರೆ, ದುರಂತ ಸಂಭವಿಸಿ ಎರಡು ವಾರಗಳ ನಂತರವೂ ಇನ್ನೂ 76 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಸಿಕ್ಕಿಂನಲ್ಲಿ ತೀಸ್ತಾ ನದಿಯಿಂದಾಗಿ ಪ್ರವಾಹ
ಉತ್ತರ ಸಿಕ್ಕಿಂನಲ್ಲಿ ತೀಸ್ತಾ ನದಿಯಿಂದಾಗಿ ಪ್ರವಾಹ

ಗ್ಯಾಂಗ್ಟಕ್: ಇನ್ನೂ ಎರಡು ಶವಗಳು ಪತ್ತೆಯಾಗುವುದರೊಂದಿಗೆ ಸಿಕ್ಕಿಂನಲ್ಲಿನ ಪ್ರವಾಹದಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿದೆ. ಆದರೆ, ದುರಂತ ಸಂಭವಿಸಿ ಎರಡು ವಾರಗಳ ನಂತರವೂ ಇನ್ನೂ 76 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 4ರ ಮುಂಜಾನೆ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದಾಗಿ ರಾಜ್ಯದಲ್ಲಿ ಭಾರಿ ಹಾನಿಯುಂಟುಮಾಡಿತು. ಸುಮಾರು 88,000 ಜನರ ಮೇಲೆ ಪ್ರವಾಹ ಪರಿಣಾಮ ಬೀರಿತು.

ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಎಸ್‌ಡಿಎಂಎ) ಪ್ರಕಾರ, ಜಿಲ್ಲೆಯಲ್ಲಿ ಪತ್ತೆಯಾದ 26 ಮೃತದೇಹಗಳಲ್ಲಿ 15 ನಾಗರಿಕರು ಮತ್ತು 11 ಮಂದಿ ಸೈನಿಕರು ಸೇರಿದ್ದಾರೆ. ಮಂಗನ್‌ನಲ್ಲಿ ನಾಲ್ಕು, ಗ್ಯಾಂಗ್ಟಕ್‌ನಲ್ಲಿ ಎಂಟು ಮತ್ತು ನಾಮ್ಚಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ. 

ನೆರೆಯ ಪಶ್ಚಿಮ ಬಂಗಾಳದಲ್ಲಿಯೂ ಹಲವಾರು ಶವಗಳು ಪತ್ತೆಯಾಗಿವೆ. ಪ್ರವಾಹವು ತೀಸ್ತಾ ನದಿಯ ಕೆಳಭಾಗದ ಪ್ರದೇಶಗಳಿಗೆ ಶವಗಳನ್ನು ಎಳೆದೊಯ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾದ 76 ಜನರಲ್ಲಿ 28 ಮಂದಿ ಪಾಕ್ಯೊಂಗ್‌ನಿಂದ, 23 ಮಂದಿ ಗ್ಯಾಂಗ್‌ಟಾಕ್‌ನಿಂದ, 20 ಮಂದಿ ಮಂಗನ್‌ನಿಂದ ಮತ್ತು ಐವರು ನಾಮ್ಚಿಯವರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 20 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, 2,080 ಜನರು ಆಶ್ರಯ ಪಡೆದಿದ್ದಾರೆ ಎಂದು ಎಸ್‌ಎಸ್‌ಡಿಎಂಎ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com