
ಚೆನ್ನೈ: ಶಕ್ತಿ ದೇವಾಲಯಗಳ ಗರ್ಭಗುಡಿಗೆ ಮಹಿಳೆಯರು ಪ್ರವೇಶಿಸಲು ಅವಕಾಶ ಮಾಡಿಕೊಡುವಂತಹ ಕ್ರಾಂತಿಕಾರಿ ಸುಧಾರಣೆಗಳನ್ನು ತಂದಿದ್ದ ಮತ್ತು ‘ಅಮ್ಮ’ ಎಂದೇ ಖ್ಯಾತಿ ಪಡೆದಿದ್ದ ಆಧ್ಯಾತ್ಮಿಕ ಗುರು ಬಂಗಾರು ಅಡಿಗಲಾರ್ ಅವರು ಗುರುವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
82 ವರ್ಷದ ಅಡಿಗಲಾರ್ ಅವರು ಚೆನ್ನೈ ಸಮೀಪದ ಮೇಲ್ಮರುವತ್ತೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅಡಿಗಲಾರ್ ಅವರು ವಾಸ್ತವವಾಗಿ, ಮಹಿಳೆಯರು ಮುಟ್ಟಿನ ಸಮಯದಲ್ಲಿಯೂ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ಶಕ್ತಿ ಆರಾಧನೆಯ ಗುರುತಾಗಿ ಕೆಂಪು ವಸ್ತ್ರಗಳನ್ನು ಬಳಸುವ ಅವರ ಭಕ್ತರು ಅವರನ್ನು 'ಅಮ್ಮ' ಎಂದು ಪೂಜಿಸುತ್ತಾರೆ.
ಅಡಿಗಲಾರ್ ಅವರು ಸ್ಥಾಪಿಸಿದ ಅಧಿಪರಾಶಕ್ತಿ ಆಧ್ಯಾತ್ಮಿಕ ಆಂದೋಲನವು ಇಲ್ಲಿಗೆ ಸಮೀಪದ ಮೇಲ್ಮರುವತ್ತೂರು ದೇವಸ್ಥಾನ ರಾಜ್ಯಾದ್ಯಂತ ಜನಪ್ರಿಯವಾಗಿದೆ. ಅವರಿಗೆ ದೊಡ್ಡ ಭಕ್ತ ಸಮೂಹವಿದೆ. ಅವರ ಆಧ್ಯಾತ್ಮಿಕ ಸೇವೆಯ ಗಮನಾರ್ಹ ವೈಶಿಷ್ಟ್ಯವೆಂದರೆ ಅವರು ನಿರ್ವಹಿಸುವ ದೇವಾಲಯಗಳ ಗರ್ಭಗುಡಿಗೆ ಮಹಿಳೆಯರ ಪ್ರವೇಶ ಮಾಡಿಸುವುದು. ಕೆಲವೆಡೆ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಭಾಗವಹಿಸಲು ಮತ್ತು ಪೂಜೆ ಮಾಡಲು ಅನುಮತಿಸಲಾಗಿದೆ.
ಅಡಿಗಲಾರ್ ಅವರಿಗೆ ಅವರ ಆಧ್ಯಾತ್ಮಿಕ ಸೇವೆಯನ್ನು ಗುರುತಿಸಿ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮೇಲ್ಮರುವತ್ತೂರಿನ ಬಹಳ ಪ್ರಸಿದ್ಧವಾದ ಶಕ್ತಿ ದೇವಾಲಯಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಹೋಗುತ್ತಾರೆ.
Advertisement